ಸತ್ಯಶೋಧ ನ್ಯೂಸ್ : ಮಧ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಯೂ ಚಳಿ ಹೆಚ್ಚಾಗಲಿದ್ದು, ರಾಜ್ಯದ ಜನತೆ ತರ ತರ ನಡುಗುವಂತಾಗಿದೆ. ಇನ್ನು ಕರಾವಳಿ ಭಾಗದಲ್ಲಿ ಒಣಹವೆ ಇರಲಿದ್ದು ಹವಾಮಾನ ಇಲಾಖೆ ತಿಳಿಸಿದೆ .ಬೀದರ್​​, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗದಲ್ಲಿ ಭಾರಿ ಚಳಿ ಇರಲಿದ್ದು ಅರೆಂಜ್​​ ಅಲರ್ಟ್​​ ಇರಲಿದೆ. ಕೊಪ್ಪಳ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲೂ ಚಳಿ ಹೆಚ್ಚಿರಲಿದ್ದು ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ.

ಇನ್ನು ಚಳಿ ಹೆಚ್ಚಾದ ಹಿನ್ನಲೆ ಅರೋಗ್ಯದ ಮೇಲೆ ಪ್ರಭಾವ ಬೀರಲಿದೆ. ಜನತೆ ಕೊಂಚ ಎಚ್ಚರ ವಹಿಸುವುದು ಅಗತ್ಯವಾಗಿದೆ.ಹಾಗೆಯೇ ಬೆಂಗಳೂರು ನಗರದಲ್ಲಿ ನಾಳೆ ಮುಂಜಾನೆ ವೇಳೆ ಮಂಜು ಕವಿದ ವಾತಾವರಣ ಇರಲಿದ್ದು, ನಗರದ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್​​ ತಲುಪಲಿದೆ. ಹಾಗೆಯೇ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್​​ ಇರಲಿದೆ. ಗಾಳಿಯ ವೇಗ ಗಂಟೆಗೆ 5-10 ಕಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *