
ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ಕಾರ್ಯಕ್ರಮ ಡಿ 19 ರಂದು ನಡೆಯಿತು ಶ್ರೀರಾಮ ಕೊಂಡದಲ್ಲಿ ಸಾವಿರಾರು ಭಕ್ತಾದಿಗಳು ತೀರ್ಥಸ್ನಾನ ಮಾಡಿ ನಂತರ ರಾಮೇಶ್ವರ ನ ದರ್ಶನ ಮಾಡಿ ಪುನೀತರಾಗಿದ್ದಂತು ಸತ್ಯ.ರಾಮೇಶ್ವರ ದೇವರ ರಥೋತ್ಸವ: ಜಾತ್ರೆಯ ಎರಡನೇ ದಿನವಾದ ಡಿ. 20 ರಂದು ರಾಮೇಶ್ವರ ಮೂರ್ತಿಯನ್ನು

ಮೆರವಣಿಗೆ ಮೂಲಕ ರಾಜ ಬೀದಿ ಉತ್ಸವ ಮಾಡಿ ಸು 12:30 ರ ಸುಮಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀರಾಮೇಶ್ವರ ಸ್ವಾಮಿಯನ್ನು ವಿಶೇಷ ಪೂಜೆಯ ನಂತರ ಲಕ್ಷ್ಮೀಶ್ ತಂತ್ರಿಗಳ ನೇತೃತ್ವದಲ್ಲಿ ರಥೋತ್ಸವವು ಅದ್ದೂರಿಯಾಗಿ ನಡೆಯಿತು. ರಥೋತ್ಸವದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರಾಮೇಶ್ವರನ ಕೃಪೆಗೆ ಪಾತ್ರರಾದರು.

ಅನ್ನ ದಾಸೋಹ : ಪ್ರತಿ ದಿನ ಅನ್ನದಾಸೋಹವನ್ನು ಅನ್ನ ದಾಸೋಹ ಮಿತ್ರ ವೃಂದದವರಿಂದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು. ಭಕ್ತರು ಅನ್ನ ಪ್ರಸಾದ ಸೇವಿಸಿ ಸಂತೃಪ್ತರಾದರು.ತೆಪ್ಪೋತ್ಸವ :ರಾಮೇಶ್ವರ ಎಳ್ಳಾಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಭಾನುವಾರ ತೆಪ್ಪೋತ್ಸವ ಶುರುವಿಗೂ ಮುಂಚೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ರಾಮಚಂದ್ರ ಹಾಗೂ ಅವರ ಸಂಗಡಿಗರಿಂದ ಸಂಗೀತ ವೈವಿದ್ಯ ಕಾರ್ಯಕ್ರಮ ಬಹಳ ಸುಂದರವಾಗಿ ನೆರವೇರಿತು. ನಂತರ ತುಂಗಾನದಿಯಲ್ಲಿ ದೇವರ ತೆಪ್ಪೋತ್ಸವವು

ಆಕರ್ಷಕ ಕೇಂದ್ರ ಬಿಂದುವಾಗಿದ್ದು,ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ನದಿಯ ತೀರ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು ಉತ್ಸವ ಮೂರ್ತಿಯನ್ನು ವಿದ್ಯುತ್ದೀಪಾಲಂಕಾರದಿಂದ ಕೂಡಿದ ತೆಪ್ಪದಲ್ಲಿ ಕೂರಿಸಿ ಪೂಜೆ ಸಲ್ಲಿಸಿ, ನಂತರ ಆಕಾಶದತ್ತ ಸಿಡಿಮದ್ದಿನ ಪ್ರದರ್ಶನ ಶುರುವಾಯಿತು. ಪ್ರೇಕ್ಷಕರ ಕಣ್ಮನ ಸೆಳೆದವು. ಇನ್ನು ತೀರ್ಥಹಳ್ಳಿಯ ಕಮಾನು ಸೇತುವೆಯನ್ನು ದೀಪಾಲಂಕಾರದಿಂದ ಅಲಂಕಾರ ಮಾಡಿದ್ದು ಮದುವಣಗಿತ್ತಿಯಂತೆ ಕಂಗೊಳಿಸುತಿತ್ತು.

ಗಮನ ಸೆಳೆದ ಸೆಲ್ಫಿ ಪಾಯಿಂಟ್ : ಮೊದಲ ಬಾರಿಗೆ ಐ ಲವ್ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್ ಅನ್ನು ತೀರ್ಥಹಳ್ಳಿಯ ತುಂಗಾ ಕಾಮಾನು ಬಳಿ ಉದ್ಘಾಟನೆ ಮಾಡಿದ್ದು, ಸಚಿವರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಕರ್,ಬೇಳೂರು ಗೋಪಾಲ ಕೃಷ್ಣ, ಎಂ ಎ ಡಿ ಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಸೇರಿದಂತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು.

ಪೋಲೀಸರ ಬಿಗಿ ಬಂದೋಬಸ್ತ್ : ತಾಲೂಕಿನಲ್ಲಿ ಜಾತ್ರೆಯ ಪ್ರಯುಕ್ತ ಪೊಲೀಸರು ಬಿಗಿ ಬಂದೋಬಸ್ತ್ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ಅವಕಾಶ ಕೊಡದೆ ಸಿಸಿಟಿವಿ ಸೆರೆಯಲ್ಲಿ ಹಾಗೂ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿದ ಡಿ ವೈ ಎಸ್ ಪಿ ಅರವಿಂದ್ ಕಲಕುಚ್ಚಿ, ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಪಿ ಎಸ್ ಐ ಶಿವನಗೌಡ,ಪಿ ಎಸ್ ಐ ಕುಮಾರ್,ಪಿ ಎಸ್ ಐ ಸುಷ್ಮಾ ಇವರು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾದರಿ ಕೆಲಸ : ಪ್ರತಿ ವರ್ಷದಂತೆ ಈ ವರ್ಷವೂ ಸಹ ತೀರ್ಥಹಳ್ಳಿ ಯುವ ಬ್ರಿಗೇಡ್ ವತಿಯಿಂದ ಜಾತ್ರೆಗೆ ಬಂದ ಜನತೆಗೆ ತಂಪಾದ ಪಾನೀಯವನ್ನು ಉಚಿತವಾಗಿ ನೀಡಿ ದಾಹ ನೀಗಿಸಿದ್ದು ಎಲ್ಲೆಡೆ ವ್ಯಾಪಾಕ ಮೆಚ್ಚುಗೆಗೆ ಪಾತ್ರವಾಗಿದೆ.ವಿವಿಧ ಖಾದ್ಯ, ತಿನಿಸು ಹಾಗೂ ಆಟಿಕೆ ವಸ್ತುಗಳು : ಜಾತ್ರೆಯಲ್ಲಿ ಪ್ರೇಕ್ಷಕರನ್ನು ವಿವಿಧ ಖಾದ್ಯ, ಆಟಿಕೆ ಅಂಗಡಿಗಳು, ಆಟೋಟ, ತಿಂಡಿ ತಿನಿಸು ಜನರನ್ನು ಆಕರ್ಷಸಿದ್ದು ಜನರು ಖರೀದಿ ಮಾಡುವಲ್ಲಿ ತಲ್ಲಿನರಾದರು.ರಾಜ್ಯ ಮಟ್ಟದ ದೇಹದಾಡ್ಯ ಸ್ಪರ್ಧೆ : ತೀರ್ಥಹಳ್ಳಿ ಜಾತ್ರೆಯ ಪ್ರಯುಕ್ತ ಆರ್ ಜಿ ಫಿಟ್ನೆಸ್ ವತಿಯಿಂದ ದೇಹದಾಡ್ಯಾ ಸ್ಪರ್ಧೆ ಏರ್ಪಡಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ದೇಹದಾಡ್ಯ ಪಟುಗಳು ಭಾಗವಹಿಸಿದ್ದರು.

ಈ ವೇಳೆ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ,ತಹಶೀಲ್ದಾರ್ ರಂಜಿತ್ ಎಸ್ ಆರ್ ಎಂ ಮಂಜುನಾಥ್ ಗೌಡ ಬೇಳೂರು ಗೋಪಾಲಕೃಷ್ಣ, ಜಾತ್ರಾ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಸುಂದರೇಶ್, ಗೀತಾ ರಮೇಶ್, ಕುಕ್ಕೆ ಪ್ರಶಾಂತ್, ಅಮರಾನಾಥ್ ಶೆಟ್ಟಿ ಸೇರಿ ಇತರರು ಇದ್ದರು.

