ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಎರಡು ಪಕ್ಷಗಳಿಂದ ನಾಮಪತ್ರಗಳನ್ನು ಸಲ್ಲಿಸಲಾಗಿ ಬಿಜೆಪಿಯಿಂದ ಸೊಪ್ಪುಗುಡ್ಡೆ ರಾಘವೇಂದ್ರ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್ ಪಕ್ಷದಿಂದ ರತ್ನಾಕರ್ ಶೆಟ್ಟಿ ನಾಮಪತ್ರವನ್ನು ಸಲ್ಲಿಸಿದ್ದರು.ಕಾಂಗ್ರೆಸ್ ಪಕ್ಷದ ಅಭಿಪ್ರಾಯದಿಂದ ಬೇಸರಗೊಂಡ ಜಯಪ್ರಕಾಶ್ ಶೆಟ್ಟಿ ಪಟ್ಟಣ ಪಂಚಾಯಿತಿಗೆ ಬಂದು ವಾಪಾಸ್ ಹೊರ ನಡೆದರು. ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ರತ್ನಾಕರ ಶೆಟ್ಟಿ ಚುನಾವಣೆಯ ಆಧಾರದ ಮೇಲೆ ಅಧ್ಯಕ್ಷ ಸ್ಥಾನವನ್ನ ಪಡೆದರು.ಶಾಸಕರು ಹಾಗೂ ಸಂಸದರು ತೀರ್ಥಹಳ್ಳಿಯಲ್ಲಿ ಇದ್ದ ಕಾರಣದಿಂದ ಕುತೂಹಲ ಮೂಡಿಸಿತ್ತು.

ಆದರೆ ಇಬ್ಬರು ಪಟ್ಟಣ ಪಂಚಾಯತ್ ಬಳಿ ಬಾರದ ಹಿನ್ನಲೆ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ 8 ಮತ್ತು ಬಿಜೆಪಿ 6 ಮತಗಳಿಂದ ಮೊದಲ ಬಾರಿಗೆ ರತ್ನಕರ ಶೆಟ್ಟಿಯವರು ಅಭೂತಪೂರ್ವ ಜಯ ಗಳಿಸಿದರು.ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯಕರ್ತರ ಹರ್ಷ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಈ ಭಾರಿ ಕುತೂಹಲ ಮೂಡಿಸಿದ್ದು ಜೊತೆಗೆ ಮೊದಲ ಬಾರಿಗೆ ಅಧ್ಯಕ್ಷರಾದ ರತ್ನಕರ ಶೆಟ್ಟಿಯವರಿಗೆ ಕಿಮ್ಮನೆ ರತ್ನಕರ, ಆರ್ ಎಂ ಮಂಜುನಾಥ್ ಗೌಡರು ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು, ಸ್ನೇಹಿತರು ಅಭಿನಂದನೆ ತಿಳಿಸಿದರು ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *