

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ತೀರ್ಥಹಳ್ಳಿ ತಾಲೂಕು 1ನೇ ಯೋಜನಾ ಕಛೇರಿ ವ್ಯಾಪ್ತಿಯ ತೀರ್ಥಹಳ್ಳಿ ವಲಯ ಪ್ರಗತಿಬಂಧು ಒಕ್ಕೂಟದ ವತಿಯಿಂದ ಲಕ್ಷ ತುಳಸಿ ಅರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ದಿನಾಂಕ 29-12 – 2025ರ ಸೋಮವಾರ ತೀರ್ಥಹಳ್ಳಿ ಬಾಳೆಬೈಲಿನ ಶ್ರೀವೆಂಕಟರಮಣ ದೇವಸ್ಥಾನದ ಪ್ರಾಂಗಣದಲ್ಲಿ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಾಳೆಬೈಲು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಅನೂ ಸೂಯ ರಂಗನಾಥ್ ರವರು ವಹಿಸಿದ್ದು ಉದ್ಘಾಟಕರಾಗಿ ಮಾಜಿ ಗೃಹಸಚಿವರೂ ಹಾಲಿ ಶಾಸಕರಾದ ಆರಗಜ್ಞಾನೇಂದ್ರ. ಮುಖ್ಯ ಅತಿಥಿಗಳಾಗಿಜಿಲ್ಲಾ ನಿರ್ದೇಶಕ ಮುರಳಿಧರ್ ಶೆಟ್ಟಿ. ಅಖಿಲ ಕರ್ನಾಟಕ ಜನಜಾಗೃತಿವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹಾಲಿಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ. ಸಂಪನ್ಮೂಲ ವ್ಯಕ್ತಿಗಳಾಗಿ ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಅರವಿಂದ್ ಸೋಮಾಯಾಜಿ ಕೊಪ್ಪ, ಡಾII ಮುರಳಿಧರ್ ಕಿರಣಕೆರೆ. ಶಶಿಧರ್ ಹಂದೆ ಸದಸ್ಯರು ಶ್ರೀರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ತೀರ್ಥಹಳ್ಳಿ ಇವರು ಉಪಸ್ತಿತರಿದ್ದರು.

