
ಶಿವಮೊಗ್ಗ ದಲ್ಲಿ ನಡೆದ 21ನೇ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಆಗುಂಬೆ ಹೋಬಳಿ ಹೊನ್ನೇತಾಳು ಶಾಲೆಯ 7 ನೇ ತರಗತಿಯ ಸೃಜನ್ ಎನ್ ಎಂ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂಬಂಧ ಶಾಲೆಯ ಎಸ್ ಡಿ ಎಂ ಸಿ ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.

ಜೊತೆಗೆ ಪ್ರೋತ್ಸಾಹಿಸಿದ ಶಾಲಾ ಎಲ್ಲಾ ಶಿಕ್ಷಕರಿಗೂ ಹಾಗೆ ವಿಶೇಷ ವಾಗಿ ಶ್ರೀಮತಿ ಶಿಲ್ಪ ಮುಖ್ಯ ಶಿಕ್ಷಕರು ಮತ್ತು ಸುರೇಶ್ ಎನ್ ಕಲ್ಕೆರೆ, ಅಶ್ವಿನಿ ಹೆಚ್ ಎಸ್ ಹಾಗೂ ಶೃತಿ ಎಚ್ ಎಸ್ ಇವರಿಗೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿತ್ಯಾನಂದ ಅಣು ಗೋಡು ಧನ್ಯವಾದ ತಿಳಿಸಿದ್ದಾರೆ.ವಿದ್ಯಾರ್ಥಿಯನ್ನು ಮುತುವರ್ಜಿಯಿಂದ ಕರೆದುಕೊಂಡು ಹೋದ ಮಹಾದೇವಿ ಇವರಿಗೂ ಶಾಲೆಯ ಪರವಾಗಿ ಪೋಷಕರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಶಾಲಾ ಮೇಲುಸ್ತುವಾರಿ ಸಮಿತಿಯ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

