ತೀರ್ಥಹಳ್ಳಿ : ನಿರಂತರ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತ, ಹಣಕ್ಕಾಗಿ ತಮ್ಮತನವನ್ನು ಬಿಟ್ಟು ತೀರ್ಥಹಳ್ಳಿಯ ಜನಪ್ರಿಯ ರಾಜಕಾರಣಿ ಕಿಮ್ಮನೆ ರತ್ನಾಕ‌ರ್ ಕುರಿತು ಎಲ್ಲೆಂದರಲ್ಲಿ ಮಾತನಾಡುತ್ತಿರುವುದು ಕಿಮ್ಮನೆ ಅಭಿಮಾನಿಗಳಿಗೆ ಗಮನಕ್ಕೆ ಬಂದಿದ್ದು,ಭಾರಿ ಅಕ್ರೋಶ ವ್ಯಕ್ತವಾಗಿದೆ. ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಬುಗಿಲೆದ್ದ ಬಿನ್ನಾಭಿಪ್ರಾಯಕ್ಕೆ ಪೂರ್ಣ ವಿರಾಮ ನೀಡುವವರಾರು ಎನ್ನುವ ಪ್ರಶ್ನೆಗೆ ಉತ್ತರ ಕ್ಲಿಷ್ಟಕರವಾಗಿದ್ದು ಒಟ್ಟಾರೆಯಾಗಿ ಇದೆಲ್ಲವನ್ನು ಗಮನಿಸುತಿದ್ದ ಎದುರು ಪಕ್ಷದವರು ಹಿರಿ ಹಿರಿ ಹಿಗ್ಗಿದಂತೂ ಸತ್ಯ ಎಂದು ತೀರ್ಥಹಳ್ಳಿಯಲ್ಲಿ ಗುಸುಗುಸು- ಪಿಸು ಪಿಸು ಶುರುವಾಗಿದೆ.

ಪತ್ರದಲ್ಲೇನಿದೆ* ನಿಮ್ಮ ನಿಜ ಬಣ್ಣ ಏನು ಎಂಬುದು ಈಗ ಎಲ್ಲರಿಗೂ ತಿಳಿದಿರುವ ವಿಷಯ. ನೀವು ಅತೃಪ್ತರ ಸಭೆ ನಡೆಸಿ ಮಾಡಿದ ತಪ್ಪನ್ನು ಮುಚ್ಚಿಕೊಳ್ಳುವ ತಂತ್ರಕ್ಕೆ ಮುಂದಾಗಿರುವುದು ತೀವ್ರ ನಾಚಿಕೆಗೇಡು. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ನೀವೆಲ್ಲರು ನಮ್ಮ ನಾಯಕರ ಬಳಿ ಬಹಿರಂಗ ಕ್ಷಮೆ ಕೇಳದೆ ಇದ್ದರೆ,

ಇದೇ ಜನವರಿ 19 ರಿಂದ ನಿಮ್ಮ ವಿರುದ್ಧ ಅನಿರ್ದಿಷ್ಟಾವದಿ ಪ್ರತಿಭಟನೆ ಮಾಡಲಾಗುವುದು. ಜೊತೆಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಇನ್ನು ಗಟ್ಟಿಯಾಗಬೇಕಾದರೆ ಪಕ್ಷ ವಿರೋದಿ ಚಟುವಟಿಕೆಯನ್ನು ನಿರಂತರವಾಗಿ ನಡೆಸುತ್ತಿರುವ ವಿಶ್ವನಾಥ ಶೆಟ್ಟಿ, ಹಾರೋಗುಳಿಗೆ ವಿಶ್ವನಾಥ್, ನಮೃತ್‌, ಸುಶೀಲ ಶೆಟ್ಟಿ, ರಹಮತ್ ಉಲ್ಲಾ ಅಸಾದಿ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ನಮ್ಮ ನಾಯಕರಾದ ಮಾನ್ಯ ಕಿಮ್ಮನೆ ರತ್ನಾಕರ್ ರವರಲ್ಲಿ ಕೇಳಿಕೊಳ್ಳುತ್ತೇವೆ.

Leave a Reply

Your email address will not be published. Required fields are marked *