• ಸುದರ್ಶನ್ ರವರ ಸಾಮಾಜಿಕ ಕಳಕಳಿಗೆ ಸಂದ ಗೌರವ

ಜೆಸಿಐ ಭಾರತದ ಪ್ರತಿಷ್ಠಿತ ವಲಯ24ರ ಅನುಬಂಧ ವಲಯ ಸಮ್ಮೇಳದಲ್ಲಿ ತಾಯಿಮನೆ ಸುದರ್ಶನ್ ರವರ ಸೇವೆಯನ್ನು ಗುರುತಿಸಿ, ವೀರಶೈವ ಸಾಂಸ್ಕೃತಿಕ ಭವನದಲ್ಲಿ ವಲಯದ ಪ್ರತಿಷ್ಠಿತ ಪ್ರಶಸ್ತಿಯಾದ “ಕಮಲ ಪತ್ರ-2023” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತರು ಶ್ರೀಯುತ ಹರೇಕಳ ಹಾಜಬ್ಬ, ಸಂಸದರಾದ ಶ್ರೀಯುತ ಬಿ .ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ರವರು ಮತ್ತು ಸರ್ಜಿ ಫೌಂಡೇಶನ್ ಅಧ್ಯಕ್ಷರಾದ ಡಾ. ಧನಂಜಯ್ ಸರ್ಜಿ ಹಾಗೂ ವಲಯ24ರ ಅಧ್ಯಕ್ಷರಾದ ಜೆ ಸಿ ಅನುಷ್ ಗೌಡ, ಜೆ ಸಿ ಶ್ರೀಧರ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸತ್ಯಶೋಧ ಮಾಧ್ಯಮದ ಮಾರ್ಗದರ್ಶಕರು ಹಿತೈಷಿಗಳು ಆದ ಸುದರ್ಶನ್ ತಾಯಿಮನೆರಿಗೆ ಸತ್ಯಶೋಧ ಮಾಧ್ಯಮ ಬಳಗದಿಂದ ಅಭಿನಂದನೆ ತಿಳಿಸಿದೆ.

Leave a Reply

Your email address will not be published. Required fields are marked *