
ರಾಣೇಬೆನ್ನೂರು: ಸುಪ್ರಸಿದ್ದ ಕ್ಷೇತ್ರ ದೇವರಗುಡ್ಡದ ಶ್ರೀ ರಣದಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ರಣದಮ್ಮದೇವಿ ಜಾತ್ರೋತ್ಸವವು ಮಾ. 6ರಿಂದ 11ರವರೆಗೆ 6 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಹನುಮಂತಪ್ಪ ಹೊಳಿಯಪ್ಪನವರ ಮಾಧ್ಯಮಕ್ಕೆ ತಿಳಿದರು.

ಮಾ. 6ರಂದು ಸಾರೂ ಹಾಕುವುದು, ಮಾ 10ರಂದು ದೇವಿಗೆ ಉಡಿ ತುಂಬುವುದು, ರಾತ್ರಿ 8 ಗಂಟೆಗೆ ಗೌಡರ ಮನೆಯಿಂದ ಘಟಿ ಹೊರಡುವುದು ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ಜಾತ್ರೋತ್ಸವದ ಆಂಗವಾಗಿ ನಡೆಯಲಿವೆ. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಣದಮ್ಮ ದೇವಿ ದೇವಸ್ಥಾನವನ್ನು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಗುವುದು. ಮಾ.11 ಕ್ಕೆ ಜಾತ್ರೋತ್ಸವವು ಮುಕ್ತಾಯವಾಗಲಿದೆ ಎಂದರು.

ಶಾಸಕ ಬಸವರಾಜ ಶಿವಣ್ಣನವರ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಹಾಲಪ್ಪ ತೋಪಿನ, ನಾಗರಾಜ ಆನ್ವೇರಿ ಸೇರಿದಂತೆ ಮತ್ತಿತರರು ಈ ಧಾರ್ಮಿಕ ಕೈಂ ಕಾರ್ಯದಲ್ಲಿ ಉಪಸ್ಥಿತರಿರುವರು.ವಿಶೇಷ ಸೂಚನೆ :ನಗದು, ಆಭರಣ ಮತ್ತಿತರ ವಸ್ತುಗಳನ್ನು ದೇವಸ್ಥಾನಕ್ಕೆ ನೀಡುವವರು ದೇವಸ್ಥಾನದ ಸಮಿತಿಯಲ್ಲಿ ನೀಡಿ ಕಡ್ಡಾಯವಾಗಿ ರಸೀದಿಗಳನ್ನು ಪಡೆಯಬೇಕು

ಜೊತೆಗೆ ಭಕ್ತರು ದೇಣಿಗೆ ನೀಡುವವರು ಯೂನಿಯನ್ ಬ್ಯಾಂಕ್ 3766 02010163191 ಉಳಿತಾಯ ಖಾತೆಗೆ ಜಮಾ ಮಾಡಬಹುದು.
ಉಪಾಧ್ಯಕ್ಷ ಹನುಮಂತಪ್ಪ ನಾಯರ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಬೂಸಮ್ಮನವರ, ಮಾಲತೇಶ್ ಏಳಕುರಿ, ಮಾಲತೇಶ ಸತಗಿ ಸೇರಿದಂತೆ ಮತ್ತಿತರರು ಇದ್ದರು.

