ಸಾಗರ : ರೈಲು ಹಳಿಗೆ ತಲೆಕೊಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಾಗರ ನಗರದಲ್ಲಿ ಮಾ. 06ರಂದು ನಡೆದಿದೆ.ಮೃತರನ್ನು ಸ್ಥಳೀಯ ನಿವಾಸಿ ನಿತಿನ್ (26) ಎಂದು ಗುರುತಿಸಲಾಗಿದ್ದು

ಮಾಹಿತಿಯ ಪ್ರಕಾರ , ನಿತಿನ್ ಸಾಗರದ ದಿನಸಿ ವ್ಯಾಪಾರಿ ಆರ್.ಕೆ. ನಾಗರಾಜ್ ಅವರ ಪುತ್ರನಾಗಿದ್ದು,ಉದ್ಯಮಿ ಬೆಲ್ಲದ ಕೃಷ್ಣಪ್ಪ ರವರ ಮೊಮ್ಮಗನಾಗಿದ್ದಾನೆ. ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಮೈಸೂರಿನಿಂದ ತಾಳಗುಪ್ಪ ಕಡೆಗೆ ಸಂಚರಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಈ ಘಟನೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *