
– ಟೀ ಕ್ಯಾಂಟೀನ್ ನಲ್ಲಿ ಯಾವುದೇ ಅಕ್ರಮ ಮದ್ಯ ಮಾರಾಟವಾಗಿಲ್ಲ – ಮಂಜುನಾಥ್ ಶೆಟ್ಟಿ ಸ್ಪಷ್ಟನೆ
ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿಯ ಶಿವರಾಜ ಪುರ ಸಮೀಪದ ಬಸ್ಸ್ಟಾಂಡ್ ಪಕ್ಕದಲ್ಲಿರುವ ಟೀ ಕ್ಯಾಂಟೀನ್ ಬಗ್ಗೆ ಹಲವಾರು ಆರೋಪಗಳು ಕೇಳಿ ಬರುತಿದ್ದು, ಸಂಜೆ ವೇಳೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನಕ್ಕೆ ಮುಳುಬಾಗಿಲು ಗ್ರಾಂ ಪಂ ಸದಸ್ಯರಾದ ಮಂಜುನಾಥ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು,

ಬಡವನೊಬ್ಬ ಟೀ ಅಂಗಡಿ ಮಾಡಿದ್ದು ಸರಿ ಆದರೆ ಇಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಸ್ಥಳೀಯರು ಕೊಡ ಒಳ್ಳೆಯ ಭಾವನೆಯನ್ನೇ ವ್ಯಕ್ತಪಡಿಸಿದ್ದಾರೆ. ವಿನಃ ಕಾರಣ ಆರೋಪ ಮಾಡುವುದು ಸರಿಯಲ್ಲ. ಇತ್ತೀಚಿಗೆ ಈ ಸ್ಥಳದಲ್ಲಿ ಅಪಘಾತಗಳು ಹೆಚ್ಚಾಗಿದ್ದು ಇದಕ್ಕೆ ಕ್ಯಾಂಟೀನ್ ಹೊಣೆ ಎಂಬುದು ಹಾಸ್ಯಸ್ಪದ. ಬಡವನ ಬಗ್ಗೆ ದೋರಣೆ ಮಾಡುವ ನಿಮಗೆ ಪಕ್ಕದಲ್ಲೇ ವಿದ್ಯುತ್ ಕಂಬವೊಂದು ವಾಲಿ ನಿಂತಿದ್ದು ಬೀಳುವ ಹಂತದಲ್ಲಿದೆ ಸಮಾಜದ ಕಳಕಳಿ ಇರುವುದಾದರೆ ಇಂತಹ ಸಮಸ್ಯೆಗಳನ್ನ ಸರಿಪಡಿಸಿ ಎಂದು ಮಂಜುನಾಥ್ ಶೆಟ್ಟಿ ಪ್ರತ್ಯುತ್ತರ ನೀಡಿದ್ದಾರೆ.ಜೊತೆಗೆ ಗ್ರಾಂ ಪಂ ಸದಸ್ಯರ ಮೇಲೆ ಕ್ಯಾಂಟೀನ್ ನಲ್ಲಿ ಮದ್ಯ ಮಾರಾಟ ಮಾಡಲು ಕುಮ್ಮಕ್ಕು ನೀಡುವ ಅಪವಾದ ಹೇರಿದ್ದು ಈ ಹೇಳಿಕೆ ಸರಿಯಲ್ಲ ತಾಕತ್ತಿದ್ದಾರೆ ದೇವಸ್ಥಾನ ಬರಲಿ ಎಂದು ನಾನು ಬರುತ್ತೇನೆ ಎಂದು ತಿಳಿಸಿದ್ದಾರೆ.

