– ಬೆಳಕಿನ ಹಬ್ಬದ ಹೊಸ್ತಿಲಲ್ಲಿ ಕರ್ನಾಟಕದ ಜನತೆ

ರಾಜ್ಯದಲ್ಲಿ ದೀಪಾವಳಿ ಸಡಗರದ ಆರಂಭ ದಿನವಾದ ಇಂದು ನ.11 ರಂದು ನೀರು ತುಂಬುವ ಹಬ್ಬವನ್ನು ಆಚರಿಸುತ್ತಿದ್ದಾರೆ.ನೀರು ತುಂಬುವ ಹಬ್ಬ ಎಂದರೆ ಅದರಲ್ಲೂ ಮಲೆನಾಡಿಗರಿಗೆ ವಿಶೇಷ ಬೆಳಿಗ್ಗೆ ಪ್ರಾತ:ಕಾಲದಲ್ಲಿ ಹೊಸ ನೀರು ತಂದು ತುಳಸಿ ಮುಂದೆ ಕಲಶವಿಟ್ಟು ಗದ್ದೆಯಲ್ಲಿ ಚಿಗುರೋಡೆದ ಬತ್ತದ ಸಸಿ ಜೊತೆಗೆ ಹಿಂಡಲೇ ಕಾಯಿ ಬಳ್ಳಿ ಜೊತೆಗೆ ಅಲಂಕರಿಸಿ ಪೂಜಿಸಿ ನಂತರ ಮಾರನೇ ದಿನ ಬೆಳಿಗ್ಗೆ ಸ್ನಾನ ಮಾಡುವುದು ಪ್ರತೀತಿ.