– ದೇವರ ಕೃಪೆಗೆ ಪಾತ್ರರಾದ ಭಕ್ತರು – ತಿಮ್ಮಪ್ಪ ಗೌಡರು ಮತ್ತು ಮಕ್ಕಳು &ಮೊಮ್ಮಕ್ಕಳ ವತಿಯಿಂದ ಅನ್ನಸಂತರ್ಪಣೆ – ಹುಂಬಾಗಿ ಬ್ರಹ್ಮಲಿಂಗೇಶ್ವರದೇವರ ಹಿನ್ನಲೆ ಏನು?


ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ಹುಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಸಂಕ್ರಮಣ ಕಾರ್ಯಕ್ರಮ ನಡೆದಿದ್ದು, ಇದು 36 ತಿಂಗಳು ಮುಗಿದು 4ನೇ ವರ್ಷದ ಪ್ರಾರಂಭದಲ್ಲಿದೆ.ಇದೇ ವೇಳೆ ಸದಾ ದೇವಸ್ಥಾನಕ್ಕೆ ತಮ್ಮ ತನು ಮನ ಧನ ಸಹಕಾರ ನೀಡಿ ಇಂದಿನ ಸಾರ್ವಜನಿಕ ಅನ್ನಸಂತರ್ಪಣೆಗೂ ಸಹಕಾರ ನೀಡಿದ ತಿಮ್ಮಪ್ಪ ಗೌಡರು, ಮಹೇಶ್, ನೂತನ್ ಗೌಡ ಇವರಿಗೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ನವೀನ್ ಸನ್ಮಾನಿಸಿ ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು,ಕಾರ್ಯದರ್ಶಿ,ಸದಸ್ಯರು ಮತ್ತು ಸಾರ್ವಜನಿಕರು ಹಾಜರಿದ್ದರು.

ಹುಂಬಾಗಿ ಬ್ರಹ್ಮಲಿಂಗೇಶ್ವರದೇವರ ಹಿನ್ನಲೆ ಏನು?
ತಾಲೂಕಿನ ಆಗುಂಬೆ ಗಡಿ ಭಾಗದ ಅರೇಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ಹುಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಪರಿವಾರ ಧರ್ಮ ದೇವತೆಗಳಾಗಿ ಶ್ರೀ ಜಟಗೇಶ್ವರ,ಕ್ಷೇತ್ರಪಾಲ ಮತ್ತು ನಾಗ ದೇವತೆ ಇದ್ದು. ಪ್ರತಿ ನಿತ್ಯ ಪೂಜೆ ನಡೆಯುತ್ತದೆ.
ಪ್ರಾಚೀನ ಕಾಲದಲ್ಲಿ ಉಂಬಳಿ ಉತ್ತಾರಗಳು ಇದ್ದಂತಹ ಕ್ಷೇತ್ರ ಇದಾಗಿದ್ದು,ಕಾಲಘಟ್ಟದಲ್ಲಿ ಎಲ್ಲವೂ ದೇವರ ಸಾನಿದ್ಯದಲ್ಲಿ ಕೈ ತಪ್ಪಿರುತ್ತದೆ. ಪ್ರಸ್ತುತ ದೇವಸ್ಥಾನದಲ್ಲಿ ನಿತ್ಯ ಪೂಜೆ, ನೈವೇದ್ಯ, ನಂದಾದೀಪ, ಅರ್ಚಕರ ವೇತನ, ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸಲು ಕಷ್ಟವಾಗಿದೆ.
ಈ ದೇವಸ್ಥಾನವು ಯಕ್ಷಗಾನ ಬಯಲಾಟಕ್ಕೆ ಪ್ರಖ್ಯಾತವಾಗಿದ್ದು, ಮಹಾಭಾರತದ 18 ಪರ್ವಗಳ ಯಕ್ಷಗಾನ ನಿರಂತರ ನೆಡೆದ ಇತಿಹಾಸವಿದೆ. ವಿಶೇಷವಾಗಿ ಗೋ ಸಂರಕ್ಷಣೆಯನ್ನು ನಡೆಸಿಕೊಡುವ ದೇವರೆಂದೆ ಪ್ರಸಿದ್ಧಿಯಾಗಿದೆ. ಆಸ್ತಿಕರು ಧರ್ಮಾಭಿಮಾನಿಗಳು ಆದ ತಾವು ಸಾನಿಧ್ಯದಲ್ಲಿ ವಾರ್ಷಿಕ ನಿತ್ಯ ಪೂಜಾ ಶಾಶ್ವತ ನಿತ್ಯ ಪೂಜಾ ಕೈಂಕಾರ್ಯವನ್ನು ನಡೆಸುವ ಮೂಲಕ ಹುಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಲು ವಿನಂತಿಸಿದೆ.
ಸಂಪರ್ಕಿಸಿ :ನವೀನ್ 9035561359