- ಜಾನುವರುಗಳು ಅಪಾಯದಿಂದ ಪಾರು
- ನಿಲುವಾನೆ ಶ್ರೀನಿವಾಸ್ ಗೌಡರ ಕೊಟ್ಟಿಗೆಗೆ ಹಾನಿ
- ಪರಿಹಾರಕ್ಕೆ ಪಟ್ಟು
ಆಗುಂಬೆ : ಹೋಬಳಿಯ ನಂಟೂರು ಗ್ರಾಮದ ನಿಲುವಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ನಿಲುವಾನೆ ವಾಸಿ ಶ್ರೀನಿವಾಸ್ ಗೌಡ ಎಂಬುವವರ ಮನೆಯ ಕೊಟ್ಟಿಗೆಗೆ ಬೆಂಕಿ ತಗಲಿದ್ದು ಕೊಟ್ಟಿಗೆ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಾಲಿಕರಾದ ಶ್ರೀನಿವಾಸ್ ಅವರು ಬೆಂಕಿ ಕಂಡ ಕೂಡಲೇ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಹಗ್ಗ ತೆಗೆದು ಯಾವುದೇ ಪ್ರಾಣ ಹಾನಿಯಾಗದಂತೆ ಕಾಪಡಿದ್ದಾರೆ. ನಂತರ ಗ್ರಾಮಸ್ಥರ ಸಹಾಯ ಪಡೆದು ಅಗ್ನಿ ನಿಂದಿಸಲು ಪ್ರಯತ್ನಿಸಿದ್ದಾರೆ ನಂತರ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದೆ.ಸ್ಥಳೀಯರ ಸಹಕಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ವೇಳೆ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ರಾಘವೇಂದ್ರ ಕುಂದಾದ್ರಿ, ಪಿ ಡಿ ಓ ವಿನಯ್, ಬಿಳಿಗೆರೆ ಮಂಜುನಾಥ್ ಸ್ಥಳೀಯರು ಇದ್ದರು.