- ಸಪ್ಲಿಮೆಂಟರಿ ಪರೀಕ್ಷೆಗೆ ಅವಕಾಶ ಯಾವಾಗ?

ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ(KSEAB) ಯು 2023-24 ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮಾರ್ಚ್ 30ರ ಶನಿವಾರದಂದು ಪ್ರಕಟಿಸಲಿದೆ.ಮಂಡಳಿಯ ವೆಬ್ಸೈಟ್ karresults.nic.inನಲ್ಲಿ ಫಲಿತಾಂಶಗಳು ಅಂದು ಬೆಳಿಗ್ಗೆ 9ರಿಂದ 11 ರೊಳಗೆ ಪ್ರಕಟವಾಗಲಿದ್ದು, ರೋಲ್ ನಂಬರ್ ಆಧರಿಸಿ ಫಲಿತಾಂಶ ಪಡೆಯಬಹುದಾಗಿದೆ.ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಇಲ್ಲವೇ ಪರೀಕ್ಷೆಯನ್ನು ಬರೆಯಲಾಗದವರಿಗೆ ಮೇ ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ.

