• ಯಾರಿದು ಶಿವಕುಮಾರ್ ಗಿಳಗನಮನೆ
  • ರಾಜಕಾರಣಿಗಳೇ ನೀವೂ ಸಹಾಯ ಮಾಡಬಹುದು!

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಶಿವಕುಮಾರ್ ಜಿ ಗಿಳಗನ ಮನೆ ವೃತ್ತಿಯಲ್ಲಿ ಬಸ್ ಡ್ರೈವರ್ ಆಗಿದ್ದು, ಇತ್ತೀಚಿಗೆ ಸುಮಾರು 8-10 ವರ್ಷಗಳಿಂದ ಕೈಗೆ ಗಾಯವಾಗಿ ತದನಂತರ ಅದು ಕ್ಯಾನ್ಸರ್ ಆಗಿ ಎಡ ಕೈಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದು,ಹೆಚ್ಚಿನ ಚಿಕಿತ್ಸೆಗೂ ಹಣ ಭರಿಸುವುದು ಕಷ್ಟಸಾಧ್ಯವಾದ ಹಿನ್ನಲೆ ಆಗುಂಬೆ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ಹಾಗೂ ಆಗುಂಬೆ ಪೊಲೀಸ್ ಸಿಬ್ಬಂದಿಗಳು ತಮ್ಮ ವ್ಯಾಪ್ತಿಯಲ್ಲಿ ಹಣ ಸಂಗ್ರಹಿಸಿ ದಿ .04 ಗುರುವಾರದಂದು ಅವರಿಗೆ ಸಂಗ್ರಹವಾದ ಹಣವನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇನ್ನು ಸಾರ್ವಜನಿಕರು ರಂಗನಾಥ್ ಅಂತರಗಟ್ಟಿ ಹಾಗೂ ಆಗುಂಬೆ ಪೊಲೀಸ್ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಕುಮಾರ್ ಗಿಳಗನ ಮನೆ ಫೋನ್ ಫೆ : 9483813465

Leave a Reply

Your email address will not be published. Required fields are marked *