• ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ ಆಡಳಿತ ಮಂಡಳಿ

ಧಾರವಾಡ ಜಿಲ್ಲೆಯ ನಿಡವಣಿ ಕಲಾ ಹಾಗೂ ವಾಣಿಜ್ಯ ಕಾಲೇಜ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.ಕಾಲೇಜಿನ ಶೇಕಡಾವಾರು ಫಲಿತಾಂಶ 90%ರಷ್ಟು ಆಗಿದ್ದು .ಎಲ್ಲ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಕಾಂತೇಶ್ ಹಿರೇಮಠ 95.50%ದೊಂದಿಗೆ ಕಾಲೇಜಿಗೆ ಪ್ರಥಮ ನಿತಿನ್ ದಾದನವಾಲೆ 93.50%ಪ್ರತಿಶತ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ದ್ವಿತೀಯ .ಕಲಾ ವಿಭಾಗದಲ್ಲಿ ಮೌಲಪ್ಪ ವಿ 95% ಪಡೆಯುವುದರೊಂದಿಗೆ ಕಾಲೇಜಿಗೆ ಪ್ರಥಮ .ನಿರುಪಾದಿ ಎಂ 91% ಪ್ರತಿಶತ ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಪಡೆಯುವುದರ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಇವರನ್ನು ಸಂಸ್ಥೆಯ ಚೇರಮನರು ಮತ್ತು ಸಂಸ್ಥಾಪಕರಾದ ಶ್ರೀಮತಿ ಪ್ರಭಾ ನಿಡವಣಿರವರು,ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಸಂಸ್ಥೆಯ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸುವುದರ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *