- ಅಂಬೇಡ್ಕರ್ ಪ್ರತಿಮೆ ಅನಾವರಣ
- ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು ಹಾಗೂ ಸಾರ್ವಜನಿಕರು

ತೀರ್ಥಹಳ್ಳಿ : ತಾಲೂಕಿನ ಪಡುವಳ್ಳಿಯ ಶಾಲಾ ಮೈದಾನದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪ್ರತಿಮೆ ಅನಾವರಣಗೊಳಿಸುವ ಮೂಲಕ ಆಚರಿಸಲಾಯಿತು.ಇನ್ನು ಪಡುವಳ್ಳಿ ಹರ್ಷೇಂದ್ರ ಕುಮಾರ್ ಸ್ವಾಗತ ಭಾಷಣ ಮಾಡಿದ್ದು,ಸಾಮಾಜಿಕ ಚಿಂತಕರು, ಪ್ರಾಧ್ಯಾಪಕರು , ಹಿರಿಯರು ಆದ ಜಿ ಕೆ ರಮೇಶ್ ಪುತ್ಥಳಿ ಅನಾವರಣ ಮಾಡಿದರು.ಅನಾವರಣ ಮಾಡಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜೀವನ ಹಾಗೂ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ರೂಡಿಸಿಕೊಳ್ಳುವುದು ಮುಖ್ಯವಾಗಿದೆ. ಇಂದಿನ ಯುವ ಪೀಳಿಗೆ ವಿದ್ಯೆ ಕಲಿತು ಮಾದರಿಯಾಗಲಿ. ಎಲ್ಲರೂ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಿ ಎಂದು ನುಡಿದರು.

ಈ ವೇಳೆ ಪ್ರತಿಮೆ ಅನಾವರಣಕ್ಕೆ ಪ್ರೇರಣೆ ನೀಡಿದ ಕೊಡಸುಗೊಳ್ಳಿ ಶಾಮಣ್ಣ,ಹಾಗೂ ಶಿಲ್ಪಾ ಕಲಾಕೃತಿ ಮಾಡಿದ ಶಿಲ್ಪಿ ಸುಜಯ್ ಆಚಾರ್ಯ ಹಾಗೂ ನಾಗಪ್ಪ ಇವರರಿಗೆ ಸನ್ಮಾನಿಸಲಾಯಿತು.


ಈವೇಳೆ ಕಾರ್ಯಕ್ರಮದಲ್ಲಿ ಶಾಮಣ್ಣ ಕೊಡಸಗೋಳ್ಳಿ,ಮಾಜಿ ಶಾಸಕರಾದ ಕಡಿದಾಳ್ ದಿವಾಕರ್, ಕರವೇ ಅಧ್ಯಕ್ಷ ಯಡೂರು ಸುರೇಂದ್ರ,ಕರವೇ ಮಹಿಳಾ ಅಧ್ಯಕ್ಷೆ ಜ್ಯೋತಿ ದಿಲೀಪ್, ಗಂಗಾಧರ್ ಭಟ್,ದಯಾನಂದ್ ಕಡಿದಾಳ್,ಸಾಹುಕಾರ್ ಸೋಮಣ್ಣ, ಗ್ರಾಂ ಪಂ ಸದಸ್ಯರುಗಳಾದ ಕೋಟೆಗುಡ್ಡೆ ಸುರೇಂದ್ರ, ಭಾಗ್ಯ ಪಡುವಳ್ಳಿ, ಪ್ರೊಫೆಸರ್ ಗಣಪತಿ, ಸಾಹಿತಿಗಳಾದ ನವೀನ್ ಕುಮಾರ್, ಎ ಪಿ ಎಮ್ ಸಿ ಮಾಜಿ ಅಧ್ಯಕ್ಷರಾದ ಹಸಿರುಮನೆ ಮಹಾಬಲೇಶ್,ವಿಶಾಲ್ ಕುಮಾರ್,ಸಹ್ಯಾದ್ರಿ ಗಣಪತಿ, ಕೊರೋಡಿ ಕೃಷ್ಣಪ್ಪ, ಶಿವರಾಜ ಪುರ ಮಂಜುನಾಥ್ ಶೆಟ್ಟಿ, ಕೊರೋಡಿ ವಸುಪಾಲ್, ಪ್ರಜ್ವಲ್ ಕೊಳಿಗೆ, ಪುಟ್ಟಸ್ವಾಮಿ ಜಾವಗಲ್, ಮಂಜುನಾಥ್ ಹುಂಚಿಕೊಪ್ಪ, ಟೀಕಪ್ಪ, ಲೋಕಪ್ಪ,ರಾಮಸ್ವಾಮಿ ಜಾವಗಲ್ ಜೊತೆಗೆ ಸ್ಥಳೀಯರು ಗ್ರಾಮಸ್ಥರು ಇದ್ದರು.



