- ತೇರನ್ನು ಎಳೆದು ಪುನೀತರಾದ ಭಕ್ತ ಗಣ
- ಪ್ರತಿ ಮನೆಯಲ್ಲೂ ಭರ್ಜರಿ ಭೋಜನ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಮಳೆಗೆ ಹೆಸರುವಾಸಿಯಾದ ಹಾಗೂ ಮಳೆಯ ದೇವರೆಂದೇ ಕರೆಯಲ್ಪಡುವ ಸುಪ್ರಸಿದ್ದ ಋಷ್ಯಶೃಂಗೇಶ್ವರ ಸ್ವಾಮಿ ಜಾತ್ರೆ ಏ 14 ರಂದು ಅತ್ಯಂತ ಅದ್ದೂರಿಯಾಗಿ ನಡೆಯಿತು.ಬೆಳಿಗ್ಗೆಯಿಂದಲೆ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮವು ಸಾಂಗವಾಗಿ ನಡೆಯಿತು. ಅತ್ಯಂತ ಪುಣ್ಯ ಕ್ಷೇತ್ರಗಳಲ್ಲಿ ಋಷ್ಯಶೃಂಗೇಶ್ವರ ದೇವಸ್ಥಾನ ಕೂಡ ಒಂದಾಗಿದ್ದು ಈ ಜಾತ್ರೆಗೆ ಎಲ್ಲ ಧರ್ಮದ ಜನರು ಕೂಡ ನಂಬುವುದಲ್ಲದೆ ಜಾತ್ರೆಗೆ ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ. ಕಿಗ್ಗಾ ಸೀಮೆಗೆ ಒಳಪಡುವ ಪ್ರತಿಯೊಬ್ಬರ ಮನೆಗಳಲ್ಲಿ ಕಿಗ್ಗಾ ಜಾತ್ರೆಯ ಸಂಭ್ರಮ,ಮಾಂಸಹಾರ, ವೈನ್ ಹೀಗೆ ವಿವಿಧ ಭಕ್ಷಭೋಜನ ಮಾಡಿ ತಮ್ಮ ಬಂಧು ಬಳಗವನ್ನ ಕರೆಸಿ ಊಟ ಬಡಿಸಿ ಸಂತೃಪ್ತರಾಗುವುದು ಅನಾದಿ ಕಾಲದಿಂದ ಬಂದ ಸಂಪ್ರದಾಯ. ಜೊತೆಗೆ ಪರಿಚಯವಿಲ್ಲದವರನ್ನು. ಸಹ ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸುವುದು ಇಲ್ಲಿನ ವಿಶೇಷ ಇನ್ನು ಈ ಜಾತ್ರೆಯಲ್ಲಿ ಆಟಿಕೆ ಅಂಗಡಿಗಳು, ತಿನಿಸುಗಳು, ಗೃಹಪಯೋಗಿ ವಸ್ತುಗಳು ಭಕ್ತರ ಹಾಗೂ ಗ್ರಾಹಕರ ಗಮನ ಸೆಳೆದವು.



