- ಮನೆಯವರು ಅಸಮಾಧಾನ ಗೊಂಡಿದ್ದು ಯಾಕೆ
- ಇದುವರೆಗೂ ಶಿವಮೊಗ್ಗದ ಒಟ್ಟಾರೆ ಮತದಾನ ಅಂಕಿ ಅಂಶಗಳೆಷ್ಟು

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಶಿರೂರು ಬೂತ್ ವ್ಯಾಪ್ತಿ ಯಲ್ಲಿ 75 ವರ್ಷದ ಸರೋಜಮ್ಮ ಪಾರ್ಶ್ವವಾಯು ನಿಂದ ಬಳಲುತ್ತಿದ್ದರೂ ಈ ವರೆಗೆ ಮುಂಚಿತವಾಗಿ ಮತದಾನ ಮಾಡುವ ಪ್ರಕ್ರಿಯೆ ಬಗ್ಗೆ ಆಶಾ ಕಾರ್ಯಕರ್ತೆಯರಾಗಲಿ ಅಥವಾ ಸಂಬಂಧ ಪಟ್ಟವರಾಗಲಿ ತಿಳಿಸಿಲ್ಲ ಎಂದು ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆದರೆ ಸರೋಜಮ್ಮ ನಾನು ಮತದಾನ ಮಾಡುವ ಇಚ್ಛೆಯನ್ನು ಸತ್ಯಶೋಧ ಮಾದ್ಯಮಕ್ಕೆ ತಿಳಿಸಿದ್ದು ಅದರಂತೆ ಅವರನ್ನು ಮೊಮ್ಮಕ್ಕಳಾದ ಚಂದನ ಹಾಗೂ ಶ್ರೇಯಸ್ ಎತ್ತಿಕೊಂಡು ಹೋಗಿ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟರು.ತಾನು ಬಲಭಾಗದ ಕಣ್ಣು ಕಾಣದ ಹಾಗೂ ಕೈ ಕಾಲುಗಳು ಮುದುಡಿ ಹೋಗಿದ್ದರು ತನ್ನ ಹಕ್ಕು ಚಲಾಯಿಸಿದ ಸರೋಜಮ್ಮ ಇವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. *ಶಿವಮೊಗ್ಗ ಜಿಲ್ಲೆಯ ಮತದಾನದ ಅಂಕಿ ಅಂಶ* ತೀರ್ಥಹಳ್ಳಿ 75.88 %, ಸಾಗರ 73.88 %ಶಿವಮೊಗ್ಗ ಗ್ರಾಮಾಂತರ 77.19 %ಶಿವಮೊಗ್ಗ ನಗರ 64.74%,ಶಿಕಾರಿಪುರ 76.69%ಇದು 5 ಗಂಟೆ ತನಕದ ವರೆಗೆ ನಡೆದ ಮತದಾನವಾಗಿದೆ