- ಚಿಕ್ಕಮಗಳೂರ ಉಳುವಾಗಿಲು ಕೆರೆಮಕ್ಕಿಯಲ್ಲಿ ಘಟನೆ

ಚಿಕ್ಕಮಗಳೂರು : ತಾಲೂಕಿನ ಉಲುವಾಗಿಲು ಸಮೀಪದ ಕೆರೆಮಕ್ಕಿ ಗ್ರಾಮದ ಯುವಕ ಶಿಕಾರಿಗೆ ಹೋದಾಗ ಮಿಸ್ ಫೈರ್ ಆಗಿ ಸಾವನಪ್ಪಿರಿವ ಘಟನೆ ನಡೆದಿದೆ.ಸಂಜು (33)ಮೃತ ದುರ್ದೈವಿ.ರಾತ್ರಿ ಶಿಕಾರಿಗೆ ಹೋದಾಗ ಮಿಸ್ ಫೈರ್ ಆಗಿ ತೋಟ ಕೋವಿ ಗುಂಡು ಸಂಜುವಿನ ಎದೆಗೆ ನಾಟಿದ್ದು ಸ್ಥಳದಲ್ಲೇ ಸಂಜು ಸಾವನಪ್ಪಿದ್ದಾನೆ. ಇನ್ನು ಮೃತ ದೇಹದ ಸಮೀಪ ತೋಟ ಕೋವಿ ಕಂಡು ಬಂದಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.ಪ್ರಕರಣ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



