ರಿಷಬ್​ ಶೆಟ್ಟಿ ಅವರು ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದಾರೆ. ಅವರಿಗೆ ಆಪ್ತರು, ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಂಚೆ ಧರಿಸಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಗೆಟಪ್​ನಲ್ಲಿ ರಿಷಬ್​ ಶೆಟ್ಟಿ ಅವರು ಗಮನ ಸೆಳೆದಿದ್ದು ವಿಶೇಷವಾಗಿತ್ತು.’ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಬೆಸ್ಟ್​ ಆಕ್ಟರ್ ನ್ಯಾಷನಲ್​ ಅವಾರ್ಡ್​ ಸಿಕ್ಕಿದೆ. ಪತ್ನಿ ಸಮೇತರಾಗಿ ದೆಹಲಿಗೆ ತೆರಳಿದ ರಿಷಬ್​ ಶೆಟ್ಟಿಅವರು ಪ್ರಶಸ್ತಿ ಸ್ವೀಕರಿಸಿ ಖುಷಿಪಟ್ಟಿದ್ದಾರೆ.

Leave a Reply

Your email address will not be published. Required fields are marked *