
ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಸಿನಿಮಾ ನಟಿಯಾಗಿ, ಧಾರವಾಹಿಗಳಲ್ಲಿ ಅಭಿನಯಿಸಿ, ನಾಟಕಗಳಲ್ಲಿ ಬಣ್ಣಹಚ್ಚಿ ಪ್ರೇಕ್ಷಕರ ಮನಸಲ್ಲಿ ಜಾಗ ಪಡೆದಿದ್ದರು . ಇದೀಗ ಕರಾವಳಿಯ ಜನಪ್ರಿಯ ಜಾನಪದ ಕಲೆ ಯಕ್ಷಗಾನದಲ್ಲಿಯೂ ಪಾತ್ರ ನಿರ್ವಹಿಸಿ ಮಿಂಚಿದ್ದಾರೆ.ಹೊನ್ನಾವರದ ಪೆರ್ಡೂರು ಮೇಳದಿಂದ ಆಯೋಜಿಸಿದ್ದ ಯಕ್ಷಗಾನದಲ್ಲಿ ಉಮಾಶ್ರೀ ಮಂಥರೆ ಪಾತ್ರದಲ್ಲಿ ಅಭಿನಯಿಸಿದ್ದು, ಜನರ ಮನಸನ್ನ ಮತ್ತೊಮ್ಮೆ ಗೆದ್ದಿದ್ದಾರೆ.




