- ಸತ್ಕರಿಸಿ, ಸನ್ಮಾನ ಮಾಡಿದ ಫೈರ್ ಬ್ರಾಂಡ್ ಶಿವಣ್ಣ

ಶಿವಮೊಗ್ಗ :ಲೋಕಸಭಾ ಚುನಾವಣೆ ಸಮೀಪ ಬಂದಂತೆ ರಾಜ್ಯ ನಾಯಕರುಗಳು ಪ್ರವಾಸ ಕೈಗೊಂಡ ಹಿನ್ನಲೆ ದಿ 03 ರಂದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಮಂಡ್ಯ ಕ್ಷೇತ್ರದ ಶಾಸಕರಾದ ರವಿ ಗಣಿಗ ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಂದ್ರಶೇಖರ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದುರ್ಗಪ್ಪ ಗೌಡ್ರು ಹಾಗೂ ಶಿವಮೊಗ್ಗ ಗ್ರಾಮಾಂತರ ಉಸ್ತುವಾರಿಗಳಾದ ದಿನೇಶ್ ಪಾಟೀಲ್ ಕಾರ್ಯನಿಮಿತ್ತ ಕೋಣಂದೂರು ಪ್ರವಾಸ ಮುಗಿಸಿ ಮಾರ್ಗ ಮಧ್ಯೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಶಿವಮೊಗ್ಗ ಗ್ರಾಮಾಂತರ ಲೋಕಸಭಾ ಚುನಾವಣೆ ಸಾಮಾಜಿಕ ಜಾಲತಾಣದ ಉಸ್ತುವಾರಿ ಸೂಡೂರು ಶಿವಣ್ಣ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಸಚಿವರಿಗೆ ಶಾಲು ಹಾರ ಹಾಕಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಘಟ್ಟ ಮಂಜಣ್ಣ ದ್ಯಾವವಿನಕೆರೆಯ ನಾಗರಾಜ್ ತಿಮರಾಜು ರಾಗಿ ಹೊಸಳ್ಳಿ ಪ್ರಶಾಂತ್ ಮಂಜಣ್ಣ ಚಿನ್ನ ಮನೆಯ ನಾಗರಾಜ್ ಕುಮಾರಣ್ಣ ಪರ್ವೇಜ್ ರಮೇಶ್ ಗಣಪತಿ ಸುರೇಶಣ್ಣ ಗಂಗಣ್ಣ ಓಂಕಾರಪ್ಪ ಮಗಳಲೆ ಇದ್ದರು ಜೊತೆಗೆ ಪಕ್ಷದ ಮುಖಂಡರು ಕಾರ್ಯಕರ್ತರನ್ನ ಭೇಟಿ ಮಾಡಿದರು.


