ದಿನಾಂಕ: 27-12-2025 ರಂದು ಬೆಳಿಗ್ಗೆ ಸುಮಾರು 09.00 ರಿಂದ ಮಧ್ಯಾಹ್ನ 02.00 ಗಂಟೆಯ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಠಾಣಾ ವ್ಯಾಪ್ತಿಯ ತಲ್ಲೂರು ಗ್ರಾಮದ ಕೌರಿಹಕ್ಲು ವಾಸಿ ಶ್ರೀ ಜೀವನ್ ಕೆ ಆರ್ ತಂದೆ ರಘುರಾಮ್ ರವರ ಮನೆಯ ಹಿಂಭಾಗಿಲನ್ನು ಮುರಿದು ಮನೆಯಲ್ಲಿದ್ದ ಸುಮಾರು 20ಗ್ರಾಂ ಸುಮಾರು ಅಂದಾಜು 240000/- ಮೌಲ್ಯದ ಬೆಲೆಬಾಳುವ ಬಂಗಾರದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಗುನ್ನೆ ನಂ:88/2025 ಕಲಂ: 331(3).305 ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಸದರಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಬಗ್ಗೆ ದಿನಾಂಕ: 27-12-2025 ರಂದು ಅರವಿಂದ್ ಕಲಗುಚ್ಚಿ, ಡಿವೈಎಸ್ಪಿ ತೀರ್ಥಹಳ್ಳಿ ಉಪವಿಭಾಗರವರ ಮಾರ್ಗದರ್ಶನದಲ್ಲಿ, ರಾಜಶೇಖರ್ ಎಲ್ ಸಿಪಿಐ ಮಾಳೂರು ವೃತ್ತ, ಶಿವನಗೌಡ ಪಿಎಸ್‌ಐ ಆಗುಂಬೆ ಠಾಣೆ ಹಾಗೂ ಸಿಬ್ಬಂದಿಗಳಾದ ದಿವಾಕರ್, ಸುರೇಶ್ ನಾಯ್ಕ, ಸುರಕ್ಷಿತ್, ವಿನಯ್‌ ಕುಮಾರ್, ಸುಭಾಷ್ ಹಾಗೂ ಚಾಲಕರಾದ ಅವಿನಾಶ್ ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿ ಈವರೆಗೆ ತನಿಖೆಯಲ್ಲಿ ದೊರೆತ ಮಾಹಿತಿಯಂತೆ ಪ್ರಕರಣದಲ್ಲಿ ಭಾಗಿಯಾಗಿರುವ

ಆರೋಪಿ ಅಶೋಕ ಕೆ ಬಿನ್ ಕೃಷ್ಣಪ್ಪ, 41 ವರ್ಷ, ಈಡಿಗರ ಜಾತಿ, ಕೂಲಿ ಕೆಲಸ, ವಾಸ ಬಸವಾಪುರ, ಹಾರೋಹಿತ್ತಲು ಅಂಚೆ, ಹೊಸನಗರ ತಾಲ್ಲೂಕು. ಈತನನ್ನು ಪತ್ತೆ ಮಾಡಿ ಬಂಧಿಸಲಾಗಿದ್ದು ಒಟ್ಟು ಸುಮಾರು 20 ಗ್ರಾಂ ತೂಕದ ಬಂಗಾರದ ಒಡವೆಗಳು ಸುಮಾರು ಅಂದಾಜು ಮೌಲ್ಯ 240000/- ವನ್ನು ಹಾಗೂ ಕೃತ್ಯಕ್ಕೆ ಬಳಸಿದ ಕೆಎ15 ಇ6521 ನೊಂದಣಿಯ ಬೈಕ್, ಅಂದಾಜು ಮೌಲ್ಯ 35000/- ವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *