ತೀರ್ಥಹಳ್ಳಿ : ಆಗುಂಬೆ ಹೋಬಳಿಯ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಯಲ್ಲಿ ಅಮಾಯಕ ಯುವಕನ ಮೇಲೆ ಆಗುಂಬೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಸ್ಥಳೀಯರ ದೂರಿನ ಮೇಲೆ ಸತ್ಯಶೋಧ ಮಾಧ್ಯಮ ವರದಿ ಮಾಡಿದ್ದು,ಪೊಲೀಸರು ಸಮವಸ್ತ್ರ ಧರಿಸದೆ ಇದ್ದ ಹಿನ್ನಲೆ ಪೊಲೀಸರು ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದಿದ್ದು.ನಂತರ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ಹಾಗೂ ಪೊಲೀಸರು ಪರಸ್ಪರ ಮಾತನಾಡಿ ತಾವು ಮಾಡಿದ ಸಣ್ಣ ಮಾತಿನ ಸ್ಪಷ್ಟತೆಯ ಕೊರತೆ ಇದ್ದಿದ್ದರಿಂದ ಇಬ್ಬರು ಬೇಸರ ವ್ಯಕ್ತಪಡಿಸಿದರು ಜೊತೆಗೆ ಮುಂದಿನ ದಿನಗಳಲ್ಲಿ ಜನ ಸ್ನೇಹಿ ಪೊಲೀಸರಿಗೆ ಸ್ಥಳೀಯರು ಸಾಥ್ ನೀಡಲಿದ್ದು ಇದರಂತೆ ಪೊಲೀಸರು ಕೂಡ ಜನರ ಕಷ್ಟದಲ್ಲಿ ಭಾಗಿಯಾಗಳಿದ್ದೇವೆ ಎಂದು ಸ್ನೇಹ ವಿನಿಮಯ ಮಾಡಿಕೊಂಡರು. ಈ ಘಟನೆಯಲ್ಲಿ ಕಾಣದ ರಾಜಕೀಯ ಕೂಡ ಕೆಲಸ ಮಾಡಿದ್ದು ಪಬ್ಲಿಕ್ ಹಾಗೂ ಪೊಲೀಸರು ತಲೆ ಕೆಡಿಸಿಕೊಳ್ಳದೆ ಸಮಾಜದ ಏಳಿಗೆಗೆ ಶ್ರಮಿಸಲಿ ಎಂಬುದು ಸತ್ಯಶೋಧ ಮಾಧ್ಯಮದ ಆಶಯ.

ಇದರ ಜೊತೆಗೆ ಆಗುಂಬೆ ಠಾಣೆಯ ಠಾಣಾಧಿಕಾರಿಗಳು ಕೆಲವು ಸಿಬ್ಬಂದಿಗಳ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ. ಜೊತೆಗೆ ವಿಚಾರಣೆ ಅಥವಾ ಹಲ್ಲೆ ಮಾಡುವ ವಿಚಾರದಲ್ಲಿ ಪೊಲೀಸರು ಕೊಂಚ ಯೋಚಿಸಿ ಮುಂಡದಿಯಿಡುವುದು ಒಳಿತು ಆಗ ಮಾತ್ರ ಪೊಲೀಸರು ಹಾಗೂ ಸ್ಥಳೀಯರ ನಡುವೆ ಬಾಂಧವ್ಯ ಇನ್ನಷ್ಟು ಬಿಗಿಯಾಗಲಿದೆ ಎಂಬುದು ಎಲ್ಲರ ಆಶಯ.

Leave a Reply

Your email address will not be published. Required fields are marked *