ತೀರ್ಥಹಳ್ಳಿ : ಆಗುಂಬೆ ಶ್ರೀ ರಾಮ ಮಂದಿರ ದೇವಸ್ಥಾನದಲ್ಲಿ ದಿನಾಂಕ 08/09/2025 ರ ರಾತ್ರಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲು ಒಡೆದು ಶ್ರೀ ರಾಮ ದೇವರ ವಿಗ್ರಹ, ದೇವರ ಕೈಯಲ್ಲಿ ಇದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣ ವನ್ನು ಕಳ್ಳತನ ಮಾಡಿದ್ದೂ ಈ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಮಿಥುನ್ ಕುಮಾರ್ ಇವರ ಮಾರ್ಗದರ್ಶನ ದಲ್ಲಿ ಕಾರ್ಯಪ್ಪ ,

ರಮೇಶ್ ಪೊಲೀಸ್ ಅಧಿಕ್ಷಕರು, ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜಿ, ಪೊಲೀಸ್ ಉಪ ಅಧಿಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಇಮ್ರಾನ್ ಬೇಗ್ ವೃತ್ತ ನೀರಿಕ್ಷಕರು ಮಾಳೂರು ವೃತ್ತ (ಪ್ರಭಾರ) ತೀರ್ಥಹಳ್ಳಿ ಠಾಣೆ, ನೇತೃತ್ವದಲ್ಲಿ ಪಿ ಎಸ್ ಶಿವನ ಗೌಡರ ಹಾಗೂ ಠಾಣೆ ಸಿಬ್ಬಂದಿಗಳಾದ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಶ್ರೀ ಮತಿ ಚೇತನ, ಆದರ್ಶ ರವರು ಪ್ರಕರಣ ದಾಖಲಾದ ಎರಡು ಗಂಟೆಯೊಳಗೆ ಆರೋಪಿ ಮನೋಜ್ (27) ಗುಂಡ ತಂದೆ ಕಣ್ಣನ್ @ ಏಳು ಮಲೈ ವಾಸ ಸಂಕದ ಹೊಳೆ ತೀರ್ಥಹಳ್ಳಿ ತಾಲೂಕ್ ನನ್ನು ಬಂಧಿಸಿ ಕಳುವಾದ ವಿಗ್ರಹ, ಹಾಗೂ ಕಾಣಿಕೆ ಹುಂಡಿ ಯನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *