ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ಕಾಳಿಂಗ ಸರ್ಪ ಸಂಶೋಧನೆಯ ಖಾಸಗಿ ಸಂಸ್ಥೆಯೊಂದು ಇತ್ತೀಚೆಗೆ ಕಾಳಿಂಗ ಸರ್ಪ ಮತ್ತು ಅದರ ಅಪರೂಪದ ಮರಿಗಳ ವಿಡಿಯೋ ,ಫೋಟೋ ತೆಗೆಯಲು ವೃತ್ತಿಪರ ವನ್ಯಜೀವಿ ಫೋಟೋ, ವಿಡಿಯೋ ಛಾಯಾಗ್ರಾಹಕರಿಗೆ ಅನುವು ಮಾಡಿಕೊಡುತ್ತಾ ಅಕ್ರಮವಾಗಿ ಹಣ ಮಾಡುತ್ತಿದೆ ಎಂಬ ವಿಚಾರ ಪರಿಸರವಾದಿಗಳ ಅಕ್ರೋಷಕ್ಕೆ ಕಾರಣವಾಗಿದೆ.

ಅಂತರ ರಾಷ್ಟ್ರ ಮಟ್ಟದಲ್ಲಿ ಈ ಕಾಳಿಂಗ ಸರ್ಪ ಮತ್ತದರ ಮರಿಗಳ ವಿಡಿಯೋ ಚಿತ್ರೀಕರಣದ ತುಣುಕಿಗೆ ಭಾರಿ ಬೇಡಿಕೆ ಇದ್ದು, ಒಂದು ವಿಡಿಯೋ ತುಣುಕು ಲಕ್ಷದಿಂದ ಕೋಟಿ ಗಟ್ಟಲೆ ಬೆಲೆಗೆ ಮಾರಾಟವಾಗುತ್ತಿವೆ. ಇದನ್ನು ಅಂತರಾರಾಷ್ಟ್ರೀಯ ವನ್ಯಜೀವಿ ಚಲನಚಿತ್ರದಲ್ಲಿ ಬಳಕೆ ಮಾಡುತ್ತಿದ್ದು ಲಕ್ಷ, ಕೋಟಿ ಬೆಲೆ ಬಾಳುತಿದೆ

.ಈ ಖಾಸಗಿ ಸಂಸ್ಥೆಯ ವ್ಯಕ್ತಿ ಚಲನಚಿತ್ರ ಛಾಯಾಗ್ರಾಹಕನನ್ನ ಕರೆಸಿ, ಕಳೆದ ಶನಿವಾರ ಎರಡು ದಿನ ಅಕ್ರಮವಾಗಿ ಕಾಳಿಂಗ ಸರ್ಪ ಮತ್ತು ಮರಿಗಳನ್ನು ತಮ್ಮ ಸಂಸ್ಥೆಯ ಪ್ರದೇಶದಲ್ಲಿ ಬಿಟ್ಟುಕೊಂಡು ವಿಡಿಯೋ,ಫೋಟೋ ಚಿತ್ರೀಕರಣ ಮಾಡುವಾಗ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು .ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಹಾವುಗಳನ್ನು ಗೌಪ್ಯವಾಗಿ ಇಡಲಾಗಿತ್ತು.

ಆಗುಂಬೆಯಲ್ಲಿ ಇರುವ ಖಾಸಗಿ ಸಂಶೋಧನೆ ಹೆಸರಿನ ಸಂಸ್ಥೆ ಇಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡು ಎರಡು ಕಾಟೇಜ್ ಕೂಡ ಕಟ್ಟಿದೆ. ಸಂಸ್ಥೆಯ ಮೇಲೆ ಹಲವಾರು ಅನುಮಾನುಗಳು ಇವೆ ಕಾಳಿಂಗ ಹಾವಿನ ವಿಷ ಸಂಗ್ರಹ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಇವರಿಗೆ ಸಂಶೋಧನೆಗೆ ಅರಣ್ಯ ಇಲಾಖೆ ಅನುಮತಿ ಕೊಟ್ಟಿಲ್ಲ.

ಆದರೆ ಇಲ್ಲಿನ ಸಿಬ್ಬಂದಿಗಳು ಮಾತ್ರ ಕಾಳಿಂಗ ಸರ್ಪ ರಕ್ಷಣೆ ಹೆಸರಿನಲ್ಲಿ ಅಕ್ರಮ ಚಟುವಟಿಕೆ ಮಾಡುತ್ತಾ ಬಂದಿದ್ದಾರೆ.ಇದರ ಜೊತೆಗೆ ಪ್ರವಾಸಿಗರಿಗೆ ಹೆದುರಿಸುತ್ತಿರುವುದು, ಅಧಿಕಾರಿಗಳಿಗೆ ಕರೆ ಮಾಡಿ ಸುಮ್ಮನೆ ದೂರು ನೀಡುವುದು ಹಾಗೂ ಎಲ್ಲಿಂದನೋ ಬಂದು ತಮ್ಮ ದರ್ಪ ತೋರಿಸಿದರೆ ಸಾರ್ವಜನಿಕರ ತಾಳ್ಮೆ ನಿಲ್ಲುವುದುಂಟೆ?ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ಗಮನ ಹರಿಸಲಿ ಎಂಬುದು ಸಾರ್ವಜನಿಕರು, ಹಾಗೂ ಪರಿಸರ ವಾದಿಗಳ ಮನವಿಯಾಗಿದೆ.

Leave a Reply

Your email address will not be published. Required fields are marked *