- ಶೀತ, ಕೆಮ್ಮು, ಜ್ವರಕ್ಕೆ ನಡುಗಿದ ಕರುನಾಡು
- ನಿರ್ಲಕ್ಷ ಬೇಡ ವೈದ್ಯರ ಸಲಹೆ ಪಡೆಯಿರಿ
ರಾಜ್ಯದಲ್ಲಿ ವೈರಲ್ ಫೀವರ್ ಜಾಸ್ತಿಯಾಗಿದ್ದು, ಶೀತ, ಜ್ವರ, ಕೆಮ್ಮು ಜನರ ನಿದ್ದೆ ಕೆಡಿಸಿದೆ. ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತಿದ್ದಾರೆ.ಇನ್ನು ವೈರಲ್ ಫೀವರ್ ಬಂದಂತೆ ವಾರಗಟ್ಟಲೆಯಾದರು ಹೋಗದೆ ಮನೆ ಮಂದಿಯರನ್ನೆಲ್ಲ ಒಮ್ಮೆಲೇ ಜ್ವರದಿಂದ ನರಳುವಂತೆ ಮಾಡುತ್ತದೆ.ಇದು ಗಂಭೀರ ಸಮಸ್ಯೆಯಲ್ಲದಿದ್ದರೂ ಅರೋಗ್ಯ ದೃಷ್ಟಿಯಿಂದ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ. ಜೊತೆಗೆ ಮಳೆ ಸ್ವಲ್ಪ ಕಡಿಮೆಯಾಗಿದ್ದು, ತಂಡಿ ಗಾಳಿಗೆ ಹೊರಗಡೆ ಹೋಗುವಾಗ ಬೆಚ್ಚನೆಯ ಹೊದಿಕೆ ಬಳಸುವುದು ಉತ್ತಮ.








