• ಪಕ್ಷಿಗಳಿಗೆ ನೀರುಣಿಸುವ ಸಮರ್ಪಣಾ ತಂಡ

ಬಿಸಿಲಿನ ತಾಪಕ್ಕೆ ಭೂಮಿ ಕೆಂಡದಂತೆ ಸುಡುತ್ತಿದೆ. ನೀರಿನ ಮೂಲಗಳು ಬತ್ತಿ ಬರಿದಾಗುತ್ತಿವೆ. ಪ್ರತಿನಿತ್ಯ ನೀರಿಗಾಗಿ ಹೋರಾಟ ನಡೆಸುವ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹಾಗೆಯೇ ಒಂದು ಕ್ಷಣ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಸ್ಥಿತಿಯ ಬಗ್ಗೆ ಯೋಚಿಸಲೇಬೇಕಲ್ಲವೇ…?ನೀರಿನ ಮೂಲಗಳು ಬರಿದಾಗಿರುವಾಗ ಇವುಗಳ ಬಾಯಾರಿಕೆ ನೀಗಲು ನೆರವಾಗುವವರು ಯಾರು…?? ಯಾವುದೇ ಜೀವಿಯಾದರೂ ಅವುಗಳ ದೇಹಕ್ಕೆ ತೂಕಕ್ಕೆ ತಕ್ಕಂತೆ ನಿರ್ದಿಷ್ಟ ಪ್ರಮಾಣದ ನೀರು ಕುಡಿಯಲೇ ಬೇಕು. ಈ ಬಗ್ಗೆ ಯೋಚಿಸಿದಾಗ ಪಕ್ಷಿಗಳಿಗೆ ನೀರುಣಿಸಿ, ಪಕ್ಷಿ ಸಂಕುಲ ಉಳಿಸಿ ಎಂಬ ದ್ಯೇಯ ವಾಕ್ಯದೊಂದಿಗೆ ರಾಮಕೃಷ್ಣಪುರದ ಸಮರ್ಪಣಾ ತಂಡದ ಮಿತ್ರರು ಊರಿನ ಸುತ್ತಮುತ್ತಲಿನ ಕಾಡಿನಲ್ಲಿ ಮರಗಳ ಮೇಲೆ ಸಣ್ಣ ಸಣ್ಣ ನೀರಿನ ತೊಟ್ಟಿಯನ್ನು ಇರಿಸಿದ್ದಾರೆ. ಈ ಮೂಲಕ ಪಕ್ಷಿಗಳ ಬಾಯಾರಿಕೆ ತಣಿಸುವುದಲ್ಲದೇ ಪಕ್ಷಿಗಳ ಸಂತತಿ ಉಳಿಸುವ ಕಾರ್ಯ ಮಾಡಿದ್ದಾರೆ. ಜೊತೆಗೆ ಒಂದು ವರ್ಷದಲ್ಲಿ ಹಲವಾರು ವಿನೂತನ ಕಾರ್ಯ ಹಮ್ಮಿಕೊಂಡಿದ್ದು ಸ್ಥಳೀಯರ ಮೆಚ್ಚುಗೆ ಪಡೆದಿದ್ದಾರೆ.

ಯಾವುದೇ ಖರ್ಚಿಲ್ಲದೇ ಹಳೆಯ ಡಬ್ಬಿ, ಬಕೇಟ್ , ಪ್ಲಾಸ್ಟಿಕ್ ಚಾಕಲೇಟ್ ಡಬ್ಬ ಗಳನ್ನೇ ಬಳಸಿ ಮಾಡಿದ ನೀರುಣಿಸೋ ತೊಟ್ಟಿಗಳನ್ನು ನೀವೂ ಕೂಡಾ ನಿಮ್ಮ ನಿಮ್ಮ ಮನೆ ಸ್ಲ್ಯಾಬ್ ಮೇಲೆಯೋ ಅಥವಾ ಮನೆ ಮುಂದಿನ ಮರದಲ್ಲಿಯೋ ಇಡಿ. ಹಾಗೆ ಅದರ ಸೆಲ್ಫಿ ಯನ್ನು 8884512024ಗೆ ಕಳುಹಿಸಿ ನಾವು ಅದನ್ನು ವರದಿ ಮಾಡುತ್ತೇವೆ.

Leave a Reply

Your email address will not be published. Required fields are marked *