ದಕ್ಷಿಣ ಕನ್ನಡ : ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ಫೆ. 15ರಂದು ಮುಕ್ಕೂರು ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ ಆಶ್ರಯ ಹಾಗೂ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದಲ್ಲಿ ನೇಸರ ದಶಪ್ರಣತಿ ಪ್ರಯುಕ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಆಯೋಜನೆ ಹಾಗೂ ಸತ್ಯಶೋಧ ಮಾಧ್ಯಮದ ಅರುಣೋದಯ ಅಂಕಣಗಾರ್ತಿ ಕು ಅನನ್ಯ ಎಚ್ ಸುಬ್ರಹ್ಮಣ್ಯ ಇವರ ಎರಡನೇ ಕೃತಿ ಪ್ರಗೀತ ಬಿಡುಗಡೆ ಸಮಾರಂಭ ಅತ್ಯಂತ ಯಶಸ್ವಿಯಾಗಿ ಜರುಗಿತು.ಸು. 50ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನೇಸರ ದಶ ಪ್ರಣತಿ ಸಮಿತಿ ಸಂಚಾಲಕರಾದ ಕುಂಬ್ರ ದಯಾಕರ ಅಳ್ವ ” ಇದೊಂದು ವಿಭಿನ್ನ ಹಾಗೂ ನೂತನ ಕಾರ್ಯಕ್ರಮ ಕವಿಗೋಷ್ಠಿಯ ಮೂಲಕ ಸಾಹಿತ್ಯ ಒಂದು ವಿಶೇಷ ಅನುಭವ ನೀಡಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ರೂಪಿಸಿದ ನೇಸರ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನಿಯ ಎಂದರು.ಇನ್ನು ಕು ಅನನ್ಯ ಎಚ್ ಸುಬ್ರಹ್ಮಣ್ಯ ಇವರ ಎರಡನೇ ಕೃತಿ ಪ್ರಗೀತವನ್ನು ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಈರಯ್ಯ ದೂಂತೂರು ಲೋಕಾರ್ಪಣೆಗೊಳಿಸಿದರು. ಜೊತೆಗೆ ಕೃತಿಗಾರ್ತಿ ಅನನ್ಯ ತಮ್ಮ ಅನುಭವವನ್ನು ಹಂಚಿಕೊಂಡರು.

ಪುಸ್ತಕಕ್ಕಾಗಿ ಇಂದೇ ಸಂಪರ್ಕಿಸಿ 87624 39474

ಸು. 4 ವರ್ಷಗಳಿಂದ ಸತ್ಯಶೋಧ ನ್ಯೂಸ್ ಮಾದ್ಯಮದಲ್ಲಿ ಅರುಣೋದಯದ ಅಂಕಣಗಾರ್ತಿಯಾಗಿ ಇದೀಗ ಪ್ರಗೀತ ಪುಸ್ತಕ ಬಿಡುಗಡೆ ನಂತರದ ಪೂರ್ಣ ಪ್ರಮಾಣದ ಕವಯಿತ್ರಿಯಾಗಿ ಹೊರಹೊಮ್ಮಿದ್ದು ಖುಷಿ ತಂದಿದೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾದಿಸಲಿ ಎಂದು ಸತ್ಯಶೋಧ ನ್ಯೂಸ್ ಶುಭ ಹಾರೈಸಿದೆ.ಕಾರ್ಯಕ್ರಮದಲ್ಲಿ ಗೋಪಾಲ ಕೃಷ್ಣ ಭಟ್, ಅಶ್ವಿನಿ ಕೋಡಿ ಬೈಲು, ಉಮೇಶ್ ನಾಯಕ್, ಡಾ ನರಸಿಂಹ ಶರ್ಮ ಕಾನಾವು, ಜಗನ್ನಾಥ ಪೂಜಾರಿ, ಕುಂಬ್ರ ದಯಾಕರ ಆಳ್ವ, ನಾರಾಯಣ ಕುಂಬ್ರ, ನೇಸರ ಯುವಕ, ಯುವತಿ ಮಂಡಲದ ಪದಾಧಿಕಾರಿಗಳು,ಯುವ ಕವಿಗಳು ಇದ್ದರು.

Leave a Reply

Your email address will not be published. Required fields are marked *