

ತೀರ್ಥಹಳ್ಳಿ : ರಾಜ್ಯ ಹೆದ್ದಾರಿ ಸಂಖ್ಯೆ -1 ಪಿ ಸಿ ರಸ್ತೆಯಲ್ಲಿರುವ ಸೀಬಿನಕೆರೆ ಸರ್ಕಲ್, ಸಹ್ಯಾದ್ರಿ ಪೆಟ್ರೋಲ್ ಬಂಕ್,ಕೋಳಿ ಕಾಲು ಗುಡ್ಡದ ಮುಖ್ಯ ರಸ್ತೆಯನ್ನು ದುರಸ್ತಿ ಮಾಡಿಕೊಡುವ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಲೋಕೋಪಯೋಗಿ ಇಲಾಖೆ ತೀರ್ಥಹಳ್ಳಿ ಇಲ್ಲಿಗೆ ಮನವಿ ಮಾಡಿದ್ದಾರೆ.

ಸದರಿ ರಸ್ತೆಯಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದು, ಹಲವಾರು ಅಪಘಾತಗಳು ಸಂಭವಿಸಿವೆ ಈ ಬಗ್ಗೆ ದೂರುಗಳು ಬರುತಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ರಸ್ತೆಯನ್ನು ದುರಸ್ತಿ ಪಡಿಸಿ ಕೊಡಬೇಕಾಗಿ ಅಸಾದಿ ಮನವಿ ಮಾಡಿದ್ದಾರೆ.




