ಜಾತಿ ಗಣತಿ ಮಾಡಲು ಆಪ್ ನಕಾರ- ಶಿಕ್ಷಕರ ಪರದಾಟ – ಸ್ಟೇ ತರಲು ಮೊರೆ ಹೋಗ್ತಾರಾ ಶಿಕ್ಷಕರು

ಶಿವಮೊಗ್ಗ : ಜಿಲ್ಲೆಯಲ್ಲಿ ಸರ್ಕಾರದ ಅನುಮತಿಯಂತೆ ಇಂದಿನಿಂದ ಜಾತಿ ಗಣತಿ ಪ್ರಾರಂಭವಾಗಿದ್ದು,ಮೊದಲ ದಿನವೇ ಜಾತಿ ಗಣತಿ ಮಾಡಲು ಸರ್ಕಾರ ನೀಡಿದ ಅಪ್ ವರ್ಕ್ ಮಾಡದೇ ಶಿಕ್ಷಕರ ತಲೆನೋವಿಗೆ ಕಾರಣವಾಗಿದೆ.

ನೆಟ್ವರ್ಕ್ ಇಲ್ಲದಿದ್ದಲ್ಲಿ ವೈಫೈ ಸಹಾಯದಿಂದ ಅಪ್ ಓಪನ್ ಮಾಡಿದರರೂ ಗಣತಿ ಮಾಡಲು ಬಿಡುತ್ತಿಲ್ಲ. ಇನ್ನು ಮನೆ ಮನೆಯಲ್ಲಿ ಒಂದು ಗಂಟೆ ಕುಳಿತರೂ ಉಪಯೋಗವಾಗದ ಸ್ಥಿತಿ ನಿರ್ಮಾಣವಾಗಿದೆ.

ಇತ್ತ ಗಣತಿದಾರರ ಸಮಯ ಹಾಗೂ ಗಣತಿ ಮಾಡುವ ಮನೆಯವರ ಸಮಯ ಸಂಪೂರ್ಯ ವ್ಯರ್ಥವಾಗಿದೆ.ಇನ್ನು ಕೈ ಬರಹ ಬರೆದು ನಂತರದ ಕಂಪ್ಯೂಟರ್ ಗೆ ಮಾಹಿತಿ ಸಲ್ಲಿಸುವುದು ಸದ್ಯದ ಮಟ್ಟಿಗೆ ಹಿತಕರ ಅನ್ನಿಸುವುದು ಸತ್ಯಶೋಧ ಮಾಧ್ಯಮದ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *