
ಹುಟ್ಟಿದಾಗಿನಿಂದ ಖಾಯಿಲೆಯಿಂದ ಬಳಲುತ್ತಿದ್ದ ಮಗು ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದೆ ಎಂದು ಪೋಷಕರು ತಿಳಿದು ಆಪ್ತರಿಗೆ ಸುದ್ದಿ ತಿಳಿದ್ದರು. ನಂತರ ಮಗುವಿನ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಆ ವೇಳೆ ಮಗು ಕಣ್ತೆರೆದ ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ನಡೆದಿದೆ.ಈಗ ಮಗು ಬದುಕಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.ಇಳಕಲ್ ನಗರದ ದ್ಯಾಮಣ್ಣ ಭಜಂತ್ರಿ ಎಂಬ 13 ತಿಂಗಳ ಮಗು ಬದುಕುಳಿದಿದ್ದು, ಇದು ಮುರ್ತುಜಾ ಖಾದ್ರಿ ಪವಾಡ ಎಂದು ಪೋಷಕರು ಹೇಳ್ತಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬಂದ ಪೋಷಕರು ಮಗುವನ್ನು ದರ್ಗಾ ಕಡೆ ಕರೆದುಕೊಂಡು ಹೋಗಿ ದೇವರ ಆರ್ಶೀವಾದ ಪಡೆದು ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


