ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ದರ್ಶನ್ ರಿಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ಐದು ತಿಂಗಳುಗಳಿಂದ ಜೈಲಿನಲ್ಲಿದ್ದ ದರ್ಶನ್‌ಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.ನಟ ದರ್ಶನ್ ಮಧ್ಯಂತರ ಜಾಮೀನು ಮಂಜೂರು ಸಿಕ್ಕಿದ ಬೆನ್ನಲ್ಲಿಯೇ ಬಳ್ಳಾರಿ ಜೈಲು ಮುಂಭಾಗ ಆತನ ಅಭಿಮಾನಿಗಳು ಕೂಡ ಸೇರುತ್ತಿದ್ದಾರೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ನಟ ದನ್ವೀರ್ ಹಾಗೂ ಆಪ್ತರು ಜೈಲಿನ ಬಳಿ ಬರುವ ನಿರೀಕ್ಷೆ ಇದೆ.ಇನ್ನು ಎಲ್ಲಾ ಜಿಲ್ಲೆಯಲ್ಲೂ ದರ್ಶನ್ ಅಭಿಮಾನಿಗಳು ಭರ್ಜರಿ ಸ್ವಾಗತಕ್ಕೆ ಕಾದು ಕುಳಿತಿದ್ದಾರೆ.








