- ಸತ್ಯಶೋಧ ಇಂದಿನ ವರದಿ ಏನು?

ರಾಜಧಾನಿ ಬೆಂಗಳೂರಲ್ಲಿ ಧಾರಾಕಾರ ಮಳೆಯಾಗಿದ್ದು ಜನ ಮಹಾಮಳೆಗೆ ಕಂಗಾಲಾಗಿ ಹೋಗಿದ್ದಾರೆ.ಅಲ್ಲಲ್ಲಿ ನೀರು ನಿಂತು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ ಧಾರಕಾರ ಮಳೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ದೂರುಗಳು ಬಂದಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರೆಗುರುಳಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನು 9 ಟ್ರಾನ್ಸ್‌ಫಾರ್ಮರ್‌ಗಳಿಗೆ ಮಳೆಯಿಂದ ಹಾನಿಯಾಗಿದೆ.133 ವರ್ಷಗಳ ಹಿಂದಿನ ಧಾಖಲೆಯನ್ನು ಮುರಿದಿದೆ ಎನ್ನಲಾಗುತ್ತಿದೆ.
1 ರಿಂದ 10 ನೇ ತರಗತಿ ಮಕ್ಕಳಿಗೆ ಶುಭ ಸುದ್ದಿ
2024-25ನೇ ಸಾಲಿನ ಜೂನ್-2024 ರಿಂದ ಮಾರ್ಚ್-2025 ರವರೆಗೆ ಒಟ್ಟು 40 ವಾರಗಳ ಅವಧಿಯಲ್ಲಿ ಈ ಕೆಳಕಂಡ ವೇಳಾಪಟ್ಟಿಯಂತೆ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಪೌಷ್ಟಿಕ ಆಹಾರದ ರೂಪದಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಿತರಿಸುವ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಟೋಲ್ ದರ ಹೆಚ್ಚಳ!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಬಳಕೆ ಶುಲ್ಕವನ್ನು ಸೋಮವಾರದಿಂದಲೇ ಜಾರಿಗೆ ಬರುವಂತೆ ಶೇ.50ರಷ್ಟು ಏರಿಕೆ ಮಾಡಿದೆ.ಪ್ರತಿವರ್ಷವೂ ಸಗಟು ಹಣದುಬ್ಬರ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಟೋಲ್ ಶುಲ್ಕ ಹೆಚ್ಚಳ ವಾಹನ ಸವರರ ಜೋಬಿಗೆ ಕತ್ತರಿ ಬೀಳಲಿದೆ.
ಅಪ್ರಾಪ್ತ ಹುಡುಗನಿಂದ ವ್ಯಕ್ತಿ ಮೇಲೆ ಹಲ್ಲೆ
ಶಿವಮೊಗ್ಗ : ಮಟನ್ ಶಾಪ್ ನಲ್ಲಿ ನಡೆದ ಗಲಾಟೆಯಲ್ಲಿ ಅನ್ಯಕೋಮಿನ ಅಪ್ರಾಪ್ತ ವಯಸ್ಕ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ಮಲ್ಲೇಶ್ (40) ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿ.ಮಟನ್ ಹೆಚ್ಚಿಗೆ ಹಾಕುವಂತೆ ಹೇಳಿದಕ್ಕೆ ಗಲಾಟೆಯಾಗಿದೆ. ಗಾಯಳು ಮಲ್ಲೇಶ್ ಮೆಗ್ಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


