
ತೀರ್ಥಹಳ್ಳಿ ತಾಲೂಕು ಕಂದಾಯ ಇಲಾಖೆಯಲ್ಲಿ 41ವರ್ಷದ ಸುದೀರ್ಘ ಸೇವೆ ಸಲ್ಲಿಸಿ ತಾಲೂಕಿನಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಪಡೆದು ಇದೀಗ ನಿವೃತ್ತಿ ಪಡೆದ ನರಸಿಂಹಮೂರ್ತಿ ಹಾಗೂ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ರಾಜು ಅವರಿಗೆ ತಾಲೂಕು ಕಚೇರಿಯಲ್ಲಿ ಇಲಾಖೆ ವತಿಯಿಂದ ಮತ್ತು ಸಾರ್ವಜನಿಕರಿಂದ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಎಸ್ ಸಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಪಡುವಳ್ಳಿ ಕಿಟ್ಟಪ್ಪ, ಕುರುವಳ್ಳಿ ನಾಗರಾಜ್, ಮಂಜಪ್ಪ ಗೌಡ್ರು, ಮುಕುಂದಪ್ಪ, ನವೀನ್ ಕುಮಾರ್, ಉಪಸ್ಥಿತರಿದ್ದರು.ಜೊತೆಗೆ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.



