
(ವರದಿ ಕೃಷ್ಣಮೂರ್ತಿ ಶಿವಮೊಗ್ಗ.) ಶಿಕ್ಷಣ ಸಚಿವ ಶ್ರೀ ಮಧು ಬಂಗಾರಪ್ಪ ರವರ ತವರು ಜಿಲ್ಲೆಯಾದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕಲ್ಲಿಹಾಳ್ ಪೋಸ್ಟ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆತಟ್ಟೆಹಳ್ಳಿ ಕ್ಯಾಂಪ್ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ಪರಮೇಶ್ವರ್ ರವರು ಬೆಳಿಗ್ಗೆ 8 ಗಂಟೆಯಿಂದ 1 ಗಂಟೆಯವರೆಗೆ ಕೂಲಿ ಕೆಲಸ ಮಾಡಿ ನಂತರ ಶಾಲೆಗೆ ಬಂದು ಶಾಲಾ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡು ಶಾಲಾ ಕೈತೋಟ ನಿರ್ಮಾಣ ಶಾಲಾ ಸಣ್ಣಪುಟ್ಟ ರಿಪೇರಿಗಳನ್ನು ಮಾಡುತ್ತಾ ನಮ್ಮೂರ ಶಾಲೆ ಅಭಿವೃದ್ಧಿಗಾಗಿ ತನ್ನ ಕೊಡುಗೆಯಾಗಿ ಶಾಲಾ ಕೈ ತೋಟದಲ್ಲಿ ಸುಮಾರು 10,000 ರೂಗಳನ್ನು ಸ್ವತಹ ಖರ್ಚು ಮಾಡಿ ತಾವೇ ಖುದ್ದಾಗಿ ಇಟ್ಟಿಗೆಗಳನ್ನು ಸಿಮೆಂಟ್ ಹಾಗೂ ಬಣ್ಣಗಳನ್ನು ತರಿಸಿ ಸ್ವತಃ

ತಾವೇ ಕೆಲಸ ಮಾಡಿ ಪಾರ್ಕ್ ಮಾಡಿರುತ್ತಾರೆ ಹಾಗೂ ಶಾಲಾ ಮಕ್ಕಳ ಬಿಸಿಯೂಟಕ್ಕೆ ಮಕ್ಕಳಿಗೆ ಕುಳಿತುಕೊಂಡು ಊಟ ಮಾಡಲು ಅನುಕೂಲವಾಗಲು ಎಸ್ಡಿಎಂಸಿ ಅವರ ಸಹಕಾರ ಹಾಗೂ ದಾನಿಗಳ ಸಹಕಾರದಿಂದ ಸುಮಾರು 1,50,000 ರೂಪಾಯಿ ಮೌಲ್ಯದ ಭೋಜನ ಕೊಠಡಿ ಮಕ್ಕಳಿಗೋಸ್ಕರ ನಿರ್ಮಿಸಿರುತ್ತಾರೆ ನಮ್ಮೂರ ಶಾಲೆ ನಮ್ಮ ಹೆಮ್ಮೆ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲು ನಿಷ್ಠಾವಂತ ಕೆಲಸ ಮಾಡುತ್ತಿರುವ ಪರಮೇಶ್ವರ್ ರವರಿಗೆ ಎಲ್ಲೆಡೆಯಿಂದ ಪ್ರಶಂಷನೀಯ ವ್ಯಕ್ತವಾಗಿದೆ.


