
ಭದ್ರಾವತಿ : ಐತಿಹಾಸಿಕ ಇತಿಹಾಸ ಹೊಂದಿದ್ದ ಎಂ ಪಿ ಎಂ ಶಾಲೆ ಉಳಿವಿಗಾಗಿ ಮಧುಸೂದನ್ ಭದ್ರಾವತಿ ಧ್ವನಿ ಎತ್ತಿದ್ದು ಮೇ 02ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರನ್ನು ಭೇಟಿ ಮಾಡಿ ಭದ್ರಾವತಿಯ ಐತಿಹಾಸಿಕ ಪೇಪರ್ ಟೌನ್ (ಎಂ.ಪಿ.ಎಂ ) ಶಾಲೆಯ ವಿಚಾರವಾಗಿ ಮಾತನಾಡಿ ಅಲ್ಲಿನ ಸುತ್ತ ಮುತ್ತ ವಾಸಿಸುವ ಬಡ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

ಎಂಬ ಕಾಳಜಿಯಿಂದ ಕಾಗದ ನಗರ ಪ್ರೌಢ ಶಾಲೆಯ ಮುಂದುವರೆಸುವಂತೆ ಕೆ ಪಿ ಸಿ ಸಿ ಪದವೀಧರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಭದ್ರಾವತಿ ಸರ್ಕಾರಕ್ಕೆ ಮನವಿ ಮಾಡಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ಇದೀಗ ಎಂ ಪಿ ಎಂ ಕಾಗದ ನಗರ ಶಾಲೆ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಜೊತೆಗೆ ಮಧುಸೂದನ್ ಭದ್ರಾವತಿ ಯವರ ಅವಿರತ ಹೋರಾಟಕ್ಕೆ ಜಯ ಸಿಕ್ಕಿದ್ದು ಸತತ ಹೋರಾಟ ನಡೆಸಿ ಕೊಟ್ಟ ಮಾತಿನಂತೆ ಶಾಲೆ ಉಳಿಸಿ ಕೊಟ್ಟಿದ್ದಾರೆ. ಈ ಸಂಬಂಧ ಸಾರ್ವಜನಿಕರು ಮಧುಸೂದನ್ ಇವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಯ ವಿಶೇಷತೆಗಳೇನು –
- ಅನುಭವಿ ಶಿಕ್ಷಕರ ತಂಡ
- ವಿಶಾಲ ಹಾಗೂ ಸುಸಜ್ಜಿತ ಕಟ್ಟಡಗಳು
- ಉತ್ತಮ ಶಿಕ್ಷಣ
- ಕಂಪ್ಯೂಟರ್ ಲ್ಯಾಬ್
- ವಿಶಾಲವಾದ ಆಟದ ಮೈದಾನ
- 70 ವರ್ಷದ ಇತಿಹಾಸ ಹೊಂದಿರುವ ಶಾಲೆ
- ಜಿಲ್ಲೆಯಲ್ಲಿ ಡಿಸ್ಟಿಂಷನ್ ನೀಡಿದ ಶಾಲೆ
- ಕೂಡಲೇ ಸಂಪರ್ಕಿಸಿ 9448553365 ಕಂತರಾಜ್ ಎಂ.


