- ಗುಡ್ಡದ ಮೇಲಿನ ನೂರೊಂದು ಕುಡಿಯ ಬಾರಿ ಭೋಜನ
- ಕೇಳಿದ್ದನ್ನು ಕರುಣಿಸೋ ಭೂತಾಯಿಗೆ ರೈತನ ನಮನ

ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ತಾನು ಬೆಳೆದ ಬೆಳೆಗೆ ಪ್ರತಿಫಲ ಕರುಣಿಸುವ ಭೂಮಿ ತಾಯಿಗೆ ಸೀಗೆ ಹುಣ್ಣಿಮೆ ಅ 27 ರಂದು (ಬಗೆಬಗೆ ಖಾದ್ಯ) ಮೂಲಕ ಆಕೆಗೆ ಉಣ ಬಡಿಸಿ ಭೂಮಿಗೆ ಸೀಮಂತ ಮಾಡಿ ತೃಪ್ತಿ ಪಡಿಸುವ ಎಂಬ ನಂಬಿಕೆ ರೈತನದು.
ಭೂಮಿ ಹುಣ್ಣಿಮೆ ಒಂದು ವಾರ ಇರುವ ಮೊದಲೇ ರೈತರ ಮನೆಯಲ್ಲಿ ಹಬ್ಬದ ಸಡಗರ ಮನೆಮಾಡಿರುತ್ತದೆ. ಕೆಮ್ಮಣ್ಣು ಸುಣ್ಣದ ಚಿತ್ತಾರದ ಸೀಗಿ ಹುಣ್ಣಿಮೆ ಬುಟ್ಟಿ ಎಂದೇ ಕರೆಯುವ ಬಿದಿರಿನ ಬುಟ್ಟಿಯಲ್ಲಿ ಭೂತಾಯಿಗೆ ಬಗೆಬಗೆ ಖಾದ್ಯಗಳನ್ನು ಬಡಿಸಿ ಪೂಜಿಸುತ್ತಾರೆ.
ಭೂಮಿ ಹುಣ್ಣಿಮೆ ದಿನ 101 ಕುಡಿ ಸೇರಿದ ಬೆರೆಕೆ ಸೊಪ್ಪಿನ ಪಲ್ಯೆ ,ದೋಸೆ ಅನ್ನ, ಕಬ್ಬು ಬಳೆ ಬಿಚ್ಚೋಲೆ, ಕಂಚಿ ಕಾಯಿ ಕೊಟ್ಟೆ ಕಡಬನ್ನು ಬೆಳಗಿನ ಜಾವ ಭೂತಾಯಿಗೆ ನೈವೇದ್ಯದ ರೂಪದಲ್ಲಿ ಇಟ್ಟು ಪೂಜಿಸಿ ಅಡಿಕೆ ತೋಟ, ಗದ್ದೆ ಮನೆ ಸುತ್ತಮುತ್ತಲಿನ ಪ್ರದೇಶಗಳಿಗೆ *ಅಚ್ಚಬ್ಳಿ ಹಲಬ್ಳಿ ಗುಡ್ಡದ ಮೇಲಿನ ನೂರೊಂದು ಕುಡಿ ಬೇಲಿ ಮೇಲಿರೋ ದಾರಿರೆಕಾಯಿ ಭೂಮಿ ತಾಯಿ ಬಕ್ಯೋ ಬಕ್ಯೋ* ಎಂದು ಕೂಗುತ್ತ ಸುತ್ತಲೂ ತಳಿಯುವುದು ವಿಶೇಷ.