Oplus_131072
Oplus_131072

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹೊಸಗದ್ದೆಯ ಬಿದರಗೋಡು ಗ್ರಾಮ ಪಂಚಾಯಿತಿ ಹಳೆ ಕಟ್ಟಡ ವನ್ನು ನೆಲಸಮಗೊಳಿಸಿದ್ದು, ಅದರಲ್ಲಿ ಮರದ ಸಾಮಗ್ರಿಗಳು, ಕಲ್ಲು ಹಾಗೂ ಇತರೆ ಸಾಮಗ್ರಿಗಳನ್ನು ದಿ. 31 ರ ಸೋಮವಾರ ಬೆಳಿಗ್ಗೆ 11:30ಕ್ಕೆ ಬಿದರಗೋಡು ಕಾರ್ಯಲಯದಲ್ಲಿ ಬಹಿರಂಗ ಹರಾಜು ಮುಖಾಂತರ ನೀಡಲು ತೀರ್ಮಾನಿಸಿ ಹರಾಜು ಕರೆಯಲಾಗಿದೆ.ಆಸಕ್ತರು ಹರಾಜಿನಲ್ಲಿ ಭಾಗವಹಿಸಲು ಸತ್ಯಶೋಧ ಮಾಧ್ಯಮದ ಮೂಲಕ ಕೋರಲಾಗಿದೆ.

ಹರಾಜು ವಿವರ :

1. ಹರಾಜಿನಲ್ಲಿ ಭಾಗವಹಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು.ಗ್ರಾಂ ಪಂ ವ್ಯಾಪ್ತಿ ಹಾಗೂ ಇತರೆ ಗ್ರಾಂ, ಪಂ ವ್ಯಾಪ್ತಿಯ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ.2. ದಿ 31 ರ ಬೆಳಿಗ್ಗೆ 10:30 ರ ಒಳಗೆ ಹರಾಜಿನಲ್ಲಿ ಭಾಗವಹಿಸಬೇಕು ಜೊತೆಗೆ 10,000ರೂ ಭದ್ರತಾ ಠೇವಣಿ ನಗದು ರೂಪದಲ್ಲಿ ಪಾವತಿಸಬೇಕು 3. ಯಾವುದೇ ಕಾರಣ ನೀಡದೆ ಹರಾಜು ಮಂಜೂರು ಮಾಡುವ ಅಥವಾ ತಿರಸ್ಕಾರ ಹೆಚ್ಚಿಗೆ ಷರತ್ತನ್ನು ವಿಧಿಸುವ ಹಾಗೂ ಇತರೆ ಷರತ್ತನ್ನು ಗ್ರಾಮ ಪಂಚಾಯಿತಿ ಕಾಯ್ದಿರಿಸಿಕೊಂಡಿದೆ.4. ಹರಾಜನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಾಗೂ ರಾದ್ದುಪಡಿಸುವ ಅಧಿಕಾರವನ್ನು ಮತ್ತು ಹರಾಜಿಗೆ ಸಂಬಂದಿಸಿದ ಅಧಿಕಾರವನ್ನು ಗ್ರಾಂ ಪಂ ಕಾಯ್ದಿರಿಸಿಕೊಂಡಿದೆ5. ಹರಾಜಿನಲ್ಲಿ ಭಾಗವಹಿಸುವವರು ಗ್ರಾಮ ಪಂಚಾಯತ್ ಕಟ್ಟಡ ವನ್ನು ಹಾಗೂ ಸಾಮಗ್ರಿಯ ಯಥಾಸ್ಥಿತಿಯನ್ನು ವೀಕ್ಷಿಸಬಹುದಾಗಿದೆ.6. ಯಶಸ್ವಿ ಬಿಡ್ ದಾರರು ಈ ಕಚೇರಿಯಿಂದ ಅದೇಶ ಪತ್ರ ಪಡೆದ ನಂತರ ಗ್ರಾಂ ಪಂ ಕಟ್ಟಡವನ್ನು 20 ದಿನಗಳ ಒಳಗಾಗಿ ತೆರವುಗೊಳಿಸಿ ಹಳೆ ಸಾಮಗ್ರಿಗಳನ್ನು ಕೊಂಡೋಯ್ಯುವ ಜೊತೆಗೆ ಗೋಡೆ, ಮಣ್ಣು, ಎಲ್ಲಾ ರೀತಿಯ ಅನುಪಯುಕ್ತ ಸಾಮಗ್ರಿಗಳನ್ನು ಹಾಗೂ ಯಾವುದೇ ಅವಶೇಷಗಳಿರದಂತೆ ತೆರವು ಮಾಡಿ ಸ್ವಚ್ಛಗೊಳಿಸುವುದು.

Oplus_131072

7. ಯಶಸ್ವಿ ಬಿಡ್ ದಾರರು ನೆಲಸಮಗೊಳಿಸಿದ ಕಟ್ಟಡ ಮಣ್ಣು ಮತ್ತು ಇತರೆ ಅನುಪಯುಕ್ತ ಸಾಮಗ್ರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದೆ ಹೊರವಲಯದಲ್ಲಿ ಯಾವುದೇ ವ್ಯಾಜ್ಯ ಇಲ್ಲದೆ ಇರುವ ಸ್ಥಳದಲ್ಲಿ ಹಾಕುವುದು.ಈ ವಿಷಯದಲ್ಲಿ ಯಾವುದೇ ಸಮಸ್ಯೆ ಬಂದರು ಯಶಸ್ವಿ ಬಿಡ್ ದರರೇ ಹೊಣೆಯಾಗುತ್ತರೆ ಹೊರತು ಗ್ರಾಂ ಪಂ ಹೊಣೆಯಾಗುವುದಿಲ್ಲ.8. ಕಟ್ಟಡ ತೆರವು ಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸಿದ್ದಲ್ಲಿ ಯಶಸ್ವಿ ಬಿಡ್ ದರರೇ ಹೊಣೆಯಾಗುತ್ತರೆ ಹೊರತು ಗ್ರಾಮ ಪಂ ಹೊಣೆಯಾಗುವುದಿಲ್ಲ.

9. ಕಟ್ಟಡ ನೆಲಸಮಗೊಳಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಮುನ್ನೇಚ್ಚರಿಕೆ ವಹಿಸುವುದು.ತೊಂದರೆಯಾಗದಂತೆ ಕ್ರಮ ವಹಿಸಬೇಕು.10. ಕಟ್ಟದ ನೆಲಸಮಗೊಳಿಸುವ ಸಮಯದಲ್ಲಿ ಆಗುವ ಎಲ್ಲಾ ಆಗುಹೋಗುಗಳಿಗೆ ಬಿಡ್ ದರರೇ ಹೊಣೆ 11. ಅಖೈರು ಬಿಡ್ ದಾರರು ಅಂತಿಮ ಬಿಡ್ ಮೊತ್ತದಲ್ಲಿ ಶೇ 50 ರಷ್ಟು ಹಣವನ್ನು ಅದೇ ದಿನ ಸಂಜೆಯೊಳಗೆ ಪಾವತಿಸಬೇಕು, ಉಳಿದ ಹಣವನ್ನು ಕಾಮಗಾರಿ ಪೂರ್ವದಲ್ಲಿ ಪಾವತಿಸುವುದು.12.ಗ್ರಾಮ ಪಂಚಾಯಿತಿ ಕಲಕಾಲಕ್ಕೆ ವಿಧಿಸುವ ನಿಯಮ /ಷರತ್ತುಗಳಿಗೆ ಬದ್ಧರಾಗಿರಬೇಕು.13.ಹರಾಜಿಗೆ ಸಂಬಂದಿಸಿದ ಸರ್ಕಾರದ ನಿಗದಿತ ಮೌಲ್ಯವನ್ನು ಗ್ರಾಂ ಪಂ ತೀರ್ಮಾನಿಸಿದಂತೆ ಪ್ರಕ್ರಿಯೆ ಸಮಯದಲ್ಲಿ ತಿಳಿಸಲಾಗುವುದು 14.ಹೊಸ ಕಟ್ಟಡ ಅತೀ ತುರ್ತಾಗಿ ಆರಂಭಿಸುವುದರಿಂದ ಬಿಡ್ ಹಿಡಿದವರು ಹರಾಜು ಮುಗಿದ 2 ದಿನದಲ್ಲಿ ಸಂಪೂರ್ಣ ಜಾಗ ತೆರವುಗೊಳಿಸಬೇಕು.

Leave a Reply

Your email address will not be published. Required fields are marked *