
ಬೆಂಗಳೂರು : ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋ ಆದ ಬಿಗ್ ಬಾಸ್ ಈ ವರ್ಷದಲ್ಲಿ ಹಿಂದೆ ನಡೆದ ಎಲ್ಲಾ ಟಿ ಆರ್ ಪಿ ಗಳನ್ನು ಹೊಂದಿಕ್ಕಿ ಅತೀ ಹೆಚ್ಚು ಹೆಸರು ಮಾಡಿದ್ದು ಈ ಷೋ ವನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದರು.

24 ಸ್ಪರ್ದಿಗಳ ಪೈಕಿ ಟಾಪ್ 6 ಪಟ್ಟಿಯಲ್ಲಿ ಧನುಷ್ ಮನೆಯಿಂದ ಹೊರ ನಡೆದಿದ್ದು ಅದಾದ ಬಳಿಕ ರಘು ತಮ್ಮ ಪಯಣಕ್ಕೆ ಪೂರ್ಣ ವಿರಾಮ ಹೇಳಲಾಯಿತು. ಈ ಮದ್ಯ ನಟ ರವಿಚಂದ್ರನ್ ಮನೆಯೊಳಗೆ ಪ್ರವೇಶಿಸಿ 5 ಲಕ್ಷದ ನಗದು ನೀಡಿ ಸ್ಪರ್ಧಿಗಳ ಮನವೊಲಿಸಲು ಪ್ರಯತ್ನ ಮಾಡಿದ ಹಿನ್ನಲೆ ಯಾರು ಕೂಡ ಸ್ಪಂದಿಸಲಿಲ್ಲ ನಂತರ ಒಂದು ಚಟುವಟಿಕೆ ನೀಡಿದ್ದು ಅದರಲ್ಲಿ ಕಾವ್ಯ ಬಿಗ್ ಮನೆಯ ಪಯಣವನ್ನು 4ನೇ ಸ್ಥಾನಕ್ಕೆ ಕೊನೆಗೊಳಿಸಿದರು.ನಂತರ ಮೂರನೇ ಸ್ಥಾನಕ್ಕೆ ಅಶ್ವಿನಿ ಗೌಡ ತೃಪ್ತಿ ಪಟ್ಟುಕೊಂಡರು.

ಇದೀಗ ಗಿಲ್ಲಿ ಹಾಗೂ ರಕ್ಷಿತಾ ನಡುವೆ ಬಿಗ್ ಫೈಟ್ ನಡೆದಿದ್ದು ಗಿಲ್ಲಿ ನಟ ಈ ಸೀಸನಿನ ಕಪ್ ಗೆದ್ದರು ರಕ್ಷಿತಾ ರನ್ನರ್ ಆಗಿ ಸಂತಸ ಪಟ್ಟರು.
