- ನಂಟೂರು ಶ್ರೀಕಾಂತ್ ಅವರಿಗೆ ಸೇರಿದ ಫಾರಂ
- ಶೆಡ್ ನ ಶೀಟ್ಗಳು ಜಖಂ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕು ನಂಟೂರು ಗ್ರಾಮದ ಶ್ರೀಕಾಂತ್ ಎಂಬುವವರ ಕೋಳಿ ಫಾರಂ ಮೇಲೆ ನಿನ್ನೇ ಸುರಿದ ಭಾರಿ ಮಳೆ ಗಾಳಿಗೆ ಬೃಹದಾಕಾರದ ಮರ ಬಿದ್ದಿದ್ದು ಸುಮಾರು 50 ಕೋಳಿಗಳು ಸತ್ತು ಹೋಗಿವೆ.ಫಾರಂನ ಶೀಟ್ ಗಳು ಜಖಂ ಆಗಿದ್ದು, ಈ ಮರ ತೆರವುಗೊಳಿಸುವ ಸಂದರ್ಭದಲ್ಲಿ ಇಬ್ಬರು ಶೆಡ್ ನಿಂದ ಕೆಳಗೆ ಬಿದ್ದು ತುಂಬಾ ಗಾಯಗಳಾಗಿವೆ ಎಂದು ವರದಿಯಾಗಿದೆ.



