- ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ?

ಇಲ್ಲಿನ ನ್ಯಾಯಬೆಲೆ ಅಂಗಡಿಯ ಮಾಲೀಕ ಹಾಗೂ ಸಿವಿಲ್ ಕಂಟ್ರಾಕ್ಟರ್ ಆದ ಅಭಿಬುಲ್ಲ ಮುನ್ನಾ ಒಡೆತನಕ್ಕೆ ಸೇರಿದ ವಸತಿ ಗೃಹದಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿದೆ.ಕೊಲೆ ನಡೆದ ಸ್ಥಳಕ್ಕೆ ಮಾಳೂರು ಠಾಣೆಯ ಪೊಲೀಸರು ಆಗಮಿಸಿದ್ದು ತನಿಖೆ ಕೈಗೊಂಡಿದ್ದಾರೆ. ಆದರೆ ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.ಇನ್ನು ಹಣಗೆರೆ ಹಿಂದೂ ಮುಸ್ಲಿಂ ರ ಧಾರ್ಮಿಕ ಕ್ಷೇತ್ರವಾಗಿದ್ದು ಇಲ್ಲಿನ ಕೆಲವು ವಸತಿ ಗೃಹಗಳು ಪರವಾನಿಗೆ ಪಡೆಯದೇ ಅಕ್ರಮವಾಗಿ ವ್ಯವಹಾರಿಸುತ್ತಿದ್ದೂ ಜೊತೆ ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದೆ ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.



