- ಯಾವತ್ತಿನ ತನಕ ಸಿಗಲ್ಲ ಇಲ್ಲಿದೆ ಡೀಟೇಲ್ಸ್
- ಅಕ್ರಮ ಮದ್ಯ ಮಾರಾಟ ಮಾಡಿದ್ರೆ ಹುಷಾರ್

ಸತ್ಯಶೋಧ ಸುದ್ದಿ :* ಮದ್ಯ ಪ್ರಿಯರಿಗೆ ಇದು ಕಹಿ ಸುದ್ದಿ, ಜೂನ್ 01 ಸಂಜೆ 4 ಗಂಟೆಯಿಂದಲೇ ಬಾರ್‌ಗಳು ಬಂದ್ ಆಗಲಿವೆ. .ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ 1ರ ಸಂಜೆಯಿಂದ ಜೂನ್ 3ರವರೆಗೆ ಸಂಜೆ 4 ತನಕ ಬಾರ್‌ಗಳು ಬಂದ್ ಆಗಲಿವೆ.ಹಾಗೆ ಜೂನ್ 3 ರ ಸಂಜೆ 4 ಗಂಟೆಗೆ ತೆರೆಯಗುತ್ತದೆ. ನಂತರ ಜೂನ್ 4 ಸಂಪೂರ್ಣ ಬಂದ್ ಇರುತ್ತದೆ ಜೂನ್ 5ಕ್ಕೆ ತೆರೆದಿರುತ್ತದೆ. ನಂತರ ಜೂನ್ 6 ರಂದು ಏಣಿಕೆ ಇರುವುದರಿಂದ ಅಂದು ಕೂಡ ಮದ್ಯದಂಗಡಿಗಳು ಬಂದ್ ಆಗಿರುತ್ತದೆ.ವೀಕೆಂಡ್ನಲ್ಲೇ ಬಾರ್ ಅಂಗಡಿಗಳು ಬಾಗಿಲು ಹಾಕುತ್ತಿರುವುದರಿಂದ ಮದ್ಯ ಪ್ರಿಯರಿಗೆ ಬರ ಎದುರಾಗಿದೆ.ಜೂನ್ 3ರಂದು ಪದವೀಧರರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 6ರವರೆಗೆ ಬಾರ್‌ಗಳು ಕ್ಲೋಸ್ ಇರಲಿವೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇದ್ದು,ಆದಿನವು ಮದ್ಯದಂಗಡಿಗಳನ್ನು ಮುಚ್ಚಲಾಗುತ್ತದೆ.ಒಟ್ಟಾರೆ ಆರು ದಿನಗಳ ಕಾಲ ಮದ್ಯದಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.

ಶಿವಮೊಗ್ಗದಲ್ಲಿ ಯಾವಾಗ ಬಂದ್ ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ಮತದಾನ ಹಾಗೂ ಮತದಾನದ ಎಣಿಕೆ ಹಿನ್ನಲೆ ಜೂನ್ 1 ರಿಂದ ಸಂಜೆ 4 ರಿಂದ ಜೂನ್ 3 ರ ಸಂಜೆ 4 ರ ತನಕ ಬಂದ್ ಆಗಲಿದ್ದು, ಜೂನ್ 4 ರಂದು ಬೆಳಿಗ್ಗೆ ಯಿಂದ ರಾತ್ರಿ ತನಕ ಬೀಗ ಬೀಳಲಿದೆ. ಇನ್ನು ಜೂ 5 ಹಾಗೂ 6ರಿಂದ ಬಾಗಿಲು ತೆರೆಯಲಿವೆ. *ಅಕ್ರಮ ಮದ್ಯ ಮಾರಾಟ ಮಾಡಿದ್ರೆ ಹುಷಾರ್* ಮಲೆನಾಡಿನ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಇಲಾಖೆ ಗಮನವಿಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಆಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಲಾಗುತ್ತದೆ.ಈ ಹಿನ್ನಲೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಸಂಬಂಧ ಪಟ್ಟ ಇಲಾಖೆಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ.