ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11’ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿದ್ದು . ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂಬ ಥೀಮ್ ಇರಲಿದೆ ಎಂದು ಸುದೀಪ್ ಇಂಟರೆಸ್ಟಿಂಗ್ ಮಾಹಿತಿ ತಿಳಿಸಿದ್ದಾರೆ.ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು.ಕಳೆದ ಸೀಸನ್ ನಲ್ಲಿ ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಸುದೀಪ್ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದೆ. ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ.