
ಶಿವಮೊಗ್ಗ : ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಶಿವಮೊಗ್ಗ ರಸ್ತೆಯ ಶಿವ ಮಂದಿರ ಸಮೀಪದಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸರ್ಕಾರಿ ಮುಖ್ಯ ಶಿಕ್ಷಕ ಅರಸಾಳು ಗ್ರಾಮದ ನಿವಾಸಿ ಮಂಜಯ್ಯ (59) ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಕೋಟೆ ತಾರೀಗ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಿಪ್ಪನ್ ಪೇಟೆಯಿಂದ ಅರಸಾಳು ಕಡೆಗೆ ಬರುವ ವೇಳೆ ಮುಂದೆ ಯಿಂದ ಬೈಕ್ ಡಿಕ್ಕಿ ಹೊಡೆದು ತೀವ್ರ ರಕ್ತಸ್ರಾವವಾಗಿ ಕೊನೆಯುಸಿರಿಳೆದಿದ್ದಾರೆ.ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
