
ಶಿವಮೊಗ್ಗ : ಮಹಾತ್ಮಾ ಗಾಂಧೀಜಿ ಹೆಸರನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ಕಿತ್ತು ಹಾಕಿ ಗಾಂಧಿ ಪ್ರತಿಮೆ ಮುಂದೆ ಕುಳಿತ ಪ್ರತಿಭಟನೆ ಮಾಡುವ ಬಿಜೆಪಿ-ಜೆಡಿಎಸ್‌ಗೆ ಯಾವ ನೈತಿಕತೆ ಇದೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.ಅವರು ಶಿವಮೊಗ್ಗ ಕ್ಕೆ ಭೇಟಿ ನೀಡಿ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉದ್ಯೋಗ ಹಕ್ಕು ಪ್ರತಿಯೊಬ್ಬರಿಗೂ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯೋಜನೆಯಲ್ಲಿ ನಮ್ಮ ಕ್ಷೇತ್ರದ ಪಂಚಾಯಿತಿ ಸದಸ್ಯರ ಮೂಲಕ ೫೪ ಸಾವಿರಕ್ಕೂ ಹೆಚ್ಚು ದನದ ಕೊಟ್ಟಿಗೆಗಳನ್ನು ನಿರ್ಮಿಸಿದ ಫಲವಾಗಿ ನಮ್ಮ ಕ್ಷೇತ್ರದ ಅಧಿಕಾರಿಗೆ ದೇಶದಲ್ಲೇ ಮೊದಲ ಸ್ಥಾನ ಬಂದಿತ್ತು ಎಂದು ತಿಳಿಸಿದರು. ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರಿಡುವಂತೆ ಮನವಿ ಮಾಡಿದ್ದೇವೆ.

ಮಹಾತ್ಮ ಗಾಂಧಿಯನ್ನು ಮೊದಲು ಮರ್ಡರ್ ಮಾಡಿದವರೇ ಇವರು, ಈಗ ಬದುಕಲು ಬಿಡುತ್ತಿಲ್ಲ. ನರೇಗಾ ಯೋಜನೆಯಿಂದ ಒಳ್ಳೆಯ ಕೆಲಸ ನಡೆಯುತ್ತಿದೆ. ಹಸಿದವರಿಗೆ ಆಹಾರ ಕೊಡಲ್ಲ ಎಂದು ಹೇಳುವುದು ಸರಿಯಲ್ಲ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯೋಜನೆಯಲ್ಲಿ ಮನವರಿಕೆ ಆಗುವಂತೆ ನಮ್ಮದೇ ಶೈಲಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಬೆಳಗಾವಿ ಬಳಿ ಗೋವಾ ಗಡಿಯಲ್ಲಿ ೪೦೦ ಕೋಟಿ ದರೋಡ ಪ್ರಕರಣ ಸಿಬಿಐ ತನಿಖೆ ನಡೆಸಲಿ, ಎಲ್ಲ ವಿಚಾರ ತನಿಖೆಯಿಂದ ಹೊರಬರಲಿ. ನಮಗೆ ಗೊತ್ತಿಲ್ಲ, ಬಿಜೆಪಿಯವರಿಗೆ ಗೊತ್ತಿರಬೇಕು ಎಂದ ಅವರು,ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು. ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದರು.

ನಾನು ಮುಖ್ಯಮಂತ್ರಿಯಾಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾನು ನಮ್ಮ , ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು..ಇಲ್ಲಿ ತರಳಬಾಳು ಉತ್ಸವ ನಡೆಯುತ್ತಿದೆ. ಕನಕಪುರದಲ್ಲಿ ಕನಕೋತ್ಸವವನ್ನು ಕಾರ್ಯಕ್ರಮ ನಡೆಯುತ್ತಿದೆ. ಐದು ಗ್ಯಾರಂಟಿ ಯೋಜನೆಯಡಿ ಮನೆಗೊಂದು ರಂಗೋಲಿ ಕಾರ್ಯಕ್ರಮದಲ್ಲಿ ೭೩ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ೧೧ ಸಾವಿರ ಮುಸ್ಲಿಂ ಮಹಿಳೆಯರು ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಜಾರ್ಜ್ ರಾಜೀನಾಮೆ ವಿಚಾರವಾಗಿ ಮಾತನಾಡುತಾ, ಯಾರೇ ಆದರೂ ಅಧಿಕಾರಿಗಳೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿಲ್ಲ. ಇಲಾಖೆಯ ಅಧಿಕಾರಿಗಳು ಹೇಳಿದರೆ ಅದರಲ್ಲಿ ದೋಷವಿಲ್ಲ. ಅವರು ಹಿರಿಯ ಸಚಿವರಿದ್ದಾರೆ ನೋಡಿಕೊಳ್ಳುತ್ತಾರೆಂದರಲ್ಲದೆ, ಗುತ್ತಿಗೆದಾರರ ಸಂಘದವರು ನನ್ನ ಬಳಿ ಬಂದು ಯಾವುದೇ ವಿಚಾರವಾಗಿ ಚರ್ಚಿಸಿಲ್ಲ ಎಂದರು.
