
ತೀರ್ಥಹಳ್ಳಿ : ಈ ಭಾರಿಯ ಬಜೆಟ್ ನಲ್ಲಿ ಮುಸ್ಲಿ೦ರಿಗೆ ಅತೀ ಹೆಚ್ಚಿನ ಅನುದಾನ ನೀಡಿ ಕಾಮಗಾರಿಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿ ಅದಕ್ಕಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ವಿರುದ್ಧ ತಾಲೂಕು ಬಿ ಜೆ ಪಿ ವತಿಯಿಂದ ದಿನಾಂಕ 25 ರಂದು ಪಟ್ಟಣದ ಕುವೆಂಪು ವೃತ್ತದ ಬಳಿ ಪ್ರತಿಭಟನಾ ಸಭೆ ಹೊಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಗೃಹ ಸಚಿವರೂ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಕಾಂಗ್ರೇಸ್ ಪಕ್ಷ ಇದೂ ವರೆಗೆ ದೇಶದ ಒಳಿತಿಗಾಗಿ ಏನೂ ಮಾಡದೆ ತನ್ನ ಪಕ್ಷದ ಹಿತಕ್ಕಾಗಿ ಹಲವಾರು ಬಾರಿ ಸಂವಿಧಾನ ಉಲ್ಲಂಘನೆ ಮಾಡಿದೆ. ಈಗ ಕೇವಲ ಮುಸ್ಲಿಂ ರ ಓಲೈಕೆಗಾಗಿ ಬಜೆಟ್ ನಲ್ಲಿ ಕೋಟ್ಯಾಂತರ ರೂಗಳ ಅನುದಾನ ನೀಡಿ ಕಾಮಗಾರಿ ಗುತ್ತಿಗೆಯಲ್ಲೂ 4% ಪರ್ಸೆಂಟ್ ನೀಡಲೂ ಹೊರಟಿರುವುದು ರಾಜ್ಯಕ್ಕೆ ದೊಡ್ಡ ದುರಂತವಾಗುವುದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ಸಂವಿಧಾನವನ್ನೆ ಬದಲಾಯಿಸುತ್ತೇನೆಂದು ಹೇಳಿಕೆ ನೀಡಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯದಾದ್ಯಂತ ಪ್ರತಿಭಜನೆಯನ್ನು ಬಿ.ಜೆ.ಪಿ. ಹೊಮ್ಮಿಕೊಂಡಿದ್ದು ಅದರಂತೆ ತೀರ್ಥಹಳ್ಳಿ ಕ್ಷೇತ್ರದಲ್ಲೂ ಪ್ರತಿಭಟನೆ ಹೊಮ್ಮಿಕೊಂಡಿದೆ.

ಹಿಂದೂ ಬಾಂಧವರನ್ನು ಎರಡನೇ ದರ್ಜೆಯವರನ್ನಾಗಿ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು.ಕಾರ್ಯಕರ್ತರು ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ವನ್ನೆ ಬದಲಾಯಿಸುತ್ತೇನೆಂದು ಹೇಳಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ತಲೆಯೇ ಇಲ್ಲದ ಮಾನವ ಆಕೃತಿಯ ಪ್ರತಿಕೃತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಂಡಲ ಅಧ್ಯಕ್ಷ ಹೆದ್ದೂರು ನವೀನ್ ರವರ ಉಸ್ತುವಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ. ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋಧ ಮಂಜುನಾಥ್ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಂತೋಷ ದೇವಾಡಿಗ ತುಡ್ಕಿ ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ . ತೂ ದೂರು ಮಧುರಾಜ್ ಹೆಗ್ಡೆ ಗಬಡಿ ಪ್ರದೀಪ್ ಹಾರೋಗೊಳಿಗೆ ವಾಸುದೇವ. ಇನ್ನಿತರರು ಇದ್ದರು.


