
ತೀರ್ಥಹಳ್ಳಿ : ಗುರುವಾರದಂದು ಕಾಣೆಯಾಗಿದ್ದ ಯುವಕನ ಶವ ಹುಣಸವಳ್ಳಿ ಸಮೀಪದ ತುಂಗಾ ನದಿಯಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ.ವಸಂತ (31 ವರ್ಷ) ಸಾವನ್ನಪ್ಪಿದ ದುರ್ದೈವಿ. ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗಿದ್ದವನು ಮತ್ತೆ ಸುಳಿವು ಇರಲಿಲ್ಲ.

ಆದರೆ ಇಂದು ಹುಣಸವಳ್ಳಿ ಬಳಿ ಚಪ್ಪಲಿ ಇರುವುದು ಕಂಡು ಬಂದಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾವಿನ ಬಗ್ಗೆ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
