- ಕಳಪೆ ಕಾಮಗಾರಿ ಎಂದು ಸ್ಥಳೀಯರ ಹಿಡಿ ಶಾಪ
- – ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ್ ಸ್ಥಳಕ್ಕೆ ಭೇಟಿ

ತೀರ್ಥಹಳ್ಳಿ : ತಾಲೂಕಿನ ಬಾಳೆಬೈಲು ಹಾಗೂ ಕುರುವಳ್ಳಿ ನಡುವೆ ನೂತವಾಗಿ ನಿರ್ಮಿಸಿದ ರಸ್ತೆಯ ತಡೆಗೋಡೆ ಕುಸಿದು ಬಿದ್ದಿದ್ದು ಸಾರ್ವಜನಿಕರು ಈ ಮಾರ್ಗ ಬದಲಿಸಬೇಕಾಗಿ ಕೋರಿದೆ ಜೊತೆಗೆ ಈಗಾಗಲೇ ಮಣ್ಣು ಸವಕಾಳಿ ಉಂಟಾದ ಹಿನ್ನಲೆಯಲ್ಲಿ ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ್ ಸ್ಥಳಕ್ಕೆ ಭೇಟಿ ನೀಡಿ ಈ ಮಾರ್ಗದಲ್ಲಿ ಸಾರ್ವಜನಿಕರು ಓಡಾಡದಂತೆ ಸೂಚಿಸಿದ್ದಾರೆ.ಇನ್ನೂ ಈ ರಸ್ತೆ ಮಾಡಿ ಕೆಲವೇ ತಿಂಗಳುಗಳಾಗಿದ್ದು ಇದೊಂದು ಅವೈಜ್ಞಾನಿಕ ಕಳಪೆ ಕಾಮಗಾರಿ ಎಂದು ಸಾವಜನಿಕರು ಸಂಬಂಧ ಪಟ್ಟ ಇಲಾಖೆಗೆ ಹಿಡಿ ಶಾಪ ಹಾಕಿದ್ದಾರೆ.ಕೂಡಲೇ ಅಧಿಕಾರಿಗಳು ಕ್ಷೇತ್ರದ ಶಾಸಕರು ಗಮನಹರಿಸಲು ಮನವಿ ಮಾಡಲಾಗಿದೆ.

